July 3, 2026
Friday, July 3, 2026
spot_img

ನಟ ರವಿ ಮೋಹನ್ ಮನೆ ಕಳ್ಳತನ ಪ್ರಕರಣ: ಕಾರು ಚಾಲಕನ ಬಂಧನ, ಲಕ್ಷಾಂತರ ಮೌಲ್ಯದ ವಜ್ರದ ಸರಕ್ಕಾಗಿ ಹುಡುಕಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖ್ಯಾತ ನಟ ರವಿ ಮೋಹನ್ ನಿವಾಸದಲ್ಲಿ ನಡೆದಿದ್ದ ಆಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರ ಕಾರು ಚಾಲಕನನ್ನು ಬಂಧಿಸಿದ್ದಾರೆ. ಆದರೆ, ಕಳ್ಳತನವಾಗಿರುವ ಸುಮಾರು10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಸರ ಇನ್ನೂ ಪತ್ತೆಯಾಗಿಲ್ಲ.

ನಟ ರವಿ ಮೋಹನ್ ಚೆನ್ನೈನ ನಿವಾಸದಲ್ಲಿ ವಜ್ರದ ಸರ ಸೇರಿದಂತೆ ಬೆಲೆಬಾಳುವ ಆಭರಣಗಳು ಕಣ್ಮರೆಯಾಗಿದ್ದವು. ಈ ಕುರಿತು ಪೊಲೀಸರಿಗೆ ಅಧಿಕೃತ ದೂರು ನೀಡಲಾಗಿತ್ತು. ಕಳ್ಳತನ ನಡೆದ ಸಮಯದಿಂದಲೇ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದರಿಂದ ಆತನ ಮೇಲೆ ಬಲವಾದ ಅನುಮಾನ ವ್ಯಕ್ತವಾಗಿತ್ತು.

ಆರೋಪಿಯ ಬಂಧನ

ತನಿಖೆ ಕೈಗೆತ್ತಿಕೊಂಡ ಪೊಲೀಸರ ವಿಶೇಷ ತಂಡವು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತಲೆಮರೆಸಿಕೊಂಡಿದ್ದ ಕಾರು ಚಾಲಕನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಾಥಮಿಕ ವಿಚಾರಣೆಯ ವೇಳೆ ಬಂಧಿತ ಚಾಲಕನು ನಟನ ಮನೆಯಲ್ಲಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:

ವಜ್ರದ ಸರಕ್ಕಾಗಿ ಹುಡುಕಾಟ

ಕಳ್ಳತನವಾಗಿದ್ದ ಆಭರಣಗಳ ಪೈಕಿ 10 ಲಕ್ಷ ರೂ. ಮೌಲ್ಯದ ವಜ್ರದ ಸರ ಇನ್ನು ಕೂಡ ಪೊಲೀಸರ ಕೈಗೆ ಸಿಕ್ಕಿಲ್ಲ. ಆರೋಪಿ ಚಾಲಕನು ಆ ವಜ್ರದ ಸರವನ್ನು ಎಲ್ಲಿ ಅಡಗಿಸಿಟ್ಟಿದ್ದಾನೆ ಅಥವಾ ಬೇರೆ ಯಾರಿಗಾದರೂ ಮಾರಾಟ ಮಾಡಿದ್ದಾನೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ಸದ್ಯ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !