July 4, 2026
Saturday, July 4, 2026
spot_img

ವಿಮರ್ಶಕರ ಕೆಂಗಣ್ಣಿಗೆ ಗುರಿಯಾದ ಬಿಗ್‌ ಬಜೆಟ್‌ ʼಆಲ್ಫಾʼ ಕಲೆಕ್ಷನ್‌ ಇಲ್ವೇ ಇಲ್ಲವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಘಟಾನುಘಟಿ ಆಕ್ಟರ್ಸ್‌ ಇರುವ ಆಲ್ಫಾ ಸಿನಿಮಾ ರಿಲೀಸ್‌ ಆಗಿದ್ದು, ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಹಿನ್ನೆಡೆ ಅನುಭವಿಸಿದೆ.

ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಸಿನಿಮಾ ನೋಡಿದ ಪ್ರೇಕ್ಷಕರು ಕೆಟ್ಟ ರಿವ್ಯೂಸ್‌ ನೀಡಿದ್ದಾರೆ. ತಾವು ನೀಡಿದ ರಿವ್ಯೂಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದರಿಂದ ಸಿನಿಮಾ ಮೇಲೆ ತೀವ್ರ ಪರಿಣಾಮ ಬೀರಿದೆ.

ಈ ಹಿಂದೆ ರಿಲೀಸ್‌ ಆಗಿರುವ ಮೇ ವಾಪಸ್‌ ಆವುಂಗಾ, ಕಾಕ್‌ಟೇಲ್‌ ಹಾಗೂ ವೆಲ್ಕಮ್‌ ಟು ದಿ ಜಂಗಲ್‌ ಸಿನಿಮಾಗಳು ಥಿಯೇಟರ್‌ನಲ್ಲಿ ಇನ್ನೂ ಇದ್ದು, ಆಲ್ಫಾ ಹಿನ್ನೆಡೆಗೆ ಮತ್ತೊಂದು ಕಾರಣವಾಗಿದೆ. ದೇಶಾದ್ಯಂತ ಒಟ್ಟು 7,534 ಶೋಗಳಲ್ಲಿ ಪ್ರದರ್ಶನಗೊಂಡರೂ ಸಹ ಸಿನಿಮಾ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ಸಂಪೂರ್ಣವಾಗಿ ವಿಫಲವಾಗಿದೆ. ಈ ಚಿತ್ರವು ಮೊದಲ ದಿನ ಭಾರತದಲ್ಲಿ 9.00 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಒಟ್ಟು ಭಾರತದ ಗ್ರಾಸ್ ಕಲೆಕ್ಷನ್ 10.80 ಕೋಟಿ ರೂಪಾಯಿಗಳನ್ನು ತಲುಪಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿ ಸಿನಿಮಾ ಕೇವಲ 5.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಇದರೊಂದಿಗೆ ಚಿತ್ರದ ಮೊದಲ ದಿನದ ಒಟ್ಟು ಜಾಗತಿಕ ಗ್ರಾಸ್ ಗಳಿಕೆ ಕೇವಲ 15.80 ಕೋಟಿ ರೂಪಾಯಿಗಳಿಗೆ ಬಂದು ನಿಂತಿದೆ.

ಇದು ಯಶ್‌ ರಾಜ್‌ ಫಿಲಂ ಪ್ರೊಡಕ್ಷನ್‌ನ ಸ್ಪೈ ಯುನಿವರ್ಸ್‌ ಸರಣಿಯ ಮೊದಲ ಮಹಿಳಾ ಪ್ರಧಾನ ಆಕ್ಷನ್‌ ಸಿನಿಮಾ ಆಗಿದೆ. ಸದ್ಯ ಆಲಿಯಾ ಭಟ್‌ಗೆ ಇದು ನಿರ್ಣಾಯಕವಾಗಿತ್ತು. ಜಿಗ್ರಾ ಫ್ಲಾಪ್‌ ಆದ ನಂತರ ಆಲಿಯಾ ಆಲ್ಫಾ ಬಗ್ಗೆ ಹೋಪ್ಸ್‌ ಇಟ್ಟುಕೊಂಡಿದ್ದರು. ಆದರೆ ಇದಕ್ಕೆ ನೀರಸ ಪ್ರತಿಕ್ರಿಯೆ ಮತ್ತು ಕಳಪೆ ಕಲೆಕ್ಷನ್‌ ಆಲಿಯಾ ಭಟ್‌ಗೆ ದೊಡ್ಡ ಹಿನ್ನೆಲೆ ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !