July 4, 2026
Saturday, July 4, 2026
spot_img

6 ಜನರ ಬರ್ಬರ ಹ*ತ್ಯೆ ಕೇಸ್: ಕರ್ತವ್ಯಲೋಪದಡಿ ಪಿಎಸ್‌ಐ ಅಮಾನತು

ದಿಗಂತ ವರದಿ ವಿಜಯಪುರ:

ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಈಚೆಗೆ 6 ಜನರ ಬರ್ಬರ ಸರಣಿ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪದಡಿ ಚಡಚಣ ಪೊಲೀಸ್ ಠಾಣೆ ಪಿಎಸ್‌ಐ ಅಮಾನತುಗೊಂಡಿದ್ದಾರೆ.

ಇಲ್ಲಿನ ಪಿಎಸ್‌ಐ ಸೋಮೇಶ ಗೆಜ್ಜಿ ಅಮಾನತ್ತುಗೊಂಡಿವರು, ಈ ಸರಣಿ ಹತ್ಯೆಗೂ ಮುನ್ನ ನಿರಾಳೆ ಹಾಗೂ ಪಾಟೀಲ್  ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು, ಈ ಕಲಹ ನಿರ್ವಹಣೆಯಲ್ಲಿ ಪಿಎಸ್ಐ ಲೋಪ ಕಂಡು ಬಂದ ಹಿನ್ನೆಲೆ ಪಿಎಸ್‌ಐ ಸೋಮೇಶ ಗೆಜ್ಜಿಯನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಇದನ್ನೂ ಓದಿ:

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !