September 2, 2026
Wednesday, September 2, 2026
spot_img

CINE | ಸ್ಟಾರ್‌ಗಳಿದ್ದರೂ ಕೈ ಹಿಡಿಯದ ಪ್ರೇಕ್ಷಕರು: ‘ಆಲ್ಫಾ’ಗೆ ಬಾಕ್ಸ್ ಆಫೀಸ್‌ನಲ್ಲಿ ನಿರಾಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನ ಬಹುನಿರೀಕ್ಷಿತ ‘ಆಲ್ಫಾ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ವೇಗ ಪಡೆಯಲು ವಿಫಲವಾಗಿದೆ. ಮೊದಲ ದಿನ ಸಾಧಾರಣ ಆರಂಭ ಕಂಡಿದ್ದ ಚಿತ್ರ, ಎರಡನೇ ದಿನದ ಗಳಿಕೆಯಲ್ಲಿ ಮತ್ತಷ್ಟು ಕುಸಿತ ದಾಖಲಿಸಿದೆ.

ವೀಕೆಂಡ್‌ನಲ್ಲೂ ಹೆಚ್ಚದ ಬಾಕ್ಸ್ ಆಫೀಸ್ ಕಲೆಕ್ಷನ್

ಲಭ್ಯ ಮಾಹಿತಿಯ ಪ್ರಕಾರ, ಬಿಡುಗಡೆಗೊಂಡ ಎರಡನೇ ದಿನ ಚಿತ್ರ ಸುಮಾರು ₹8.67 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ಎರಡು ದಿನಗಳ ಒಟ್ಟು ಗಳಿಕೆ ₹17.92 ಕೋಟಿಗೆ ತಲುಪಿದೆ. ವೀಕೆಂಡ್‌ನಲ್ಲಿ ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದ್ದರೂ ಅದು ಸಾಕಾರವಾಗಿಲ್ಲ.

ಇದನ್ನೂ ಓದಿ:

ಸ್ಪೈ ಯೂನಿವರ್ಸ್ ಚಿತ್ರಗಳಿಗಿಂತ ಹಿನ್ನಡೆ

ಆಲಿಯಾ ಭಟ್ ಮತ್ತು ಶರ್ವರಿ ಅಭಿನಯದ ಈ ಆ್ಯಕ್ಷನ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೇ ಪರಿಣಾಮ ಬಾಕ್ಸ್ ಆಫೀಸ್ ಮೇಲೂ ಗೋಚರಿಸಿದೆ. ಯಶ್ ರಾಜ್ ಸ್ಪೈ ಯೂನಿವರ್ಸ್‌ನ ಹಿಂದಿನ ಹಿಟ್ ಸಿನಿಮಾಗಳೊಂದಿಗೆ ಹೋಲಿಸಿದರೆ, ‘ಆಲ್ಫಾ’ ಎರಡನೇ ದಿನದ ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿರುವ ಚಿತ್ರಗಳ ಸಾಲಿಗೆ ಸೇರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !