Tuesday, September 9, 2025

fashion | ಇದ್ಯಾವ ಸ್ಟೈಲ್ ‘ಶೂ’ನಪ್ಪಾ: ಟ್ರೆಂಡ್ ಅಂತ ಏನ್ ಏನ್ ಮಾಡ್ತಾರೋ!

ಇಂದಿನ ಕಾಲದಲ್ಲಿ ಆನ್‌ಲೈನ್ ಶಾಪಿಂಗ್ ಮತ್ತು ಲಕ್ಸುರಿ ಬ್ರ್ಯಾಂಡ್‌ಗಳ ಪ್ರಭಾವ ಜನರನ್ನು ಬೆರಗುಗೊಳಿಸುತ್ತಿದೆ. ಸಾಮಾನ್ಯ ವಸ್ತುಗಳಿಗೆ ಅತಿಯಾದ ಬೆಲೆ ನಿಗದಿ ಮಾಡಿ ಮಾರಾಟ ಮಾಡುವ ಘಟನೆಗಳು ಹೊಸದೇನಲ್ಲ. ಸೆಗಣಿಯನ್ನು COWDUNG CAKE ಅಂತ ಮಾರಾಟ ಮಾಡಿದ ಉದಾಹರಣೆಗಳಿಂದ ಹಿಡಿದು, ಹರಿದು ಹಳೆಯದಂತೆ ಕಾಣುವ ಜೀನ್ಸ್‌ಗಳಿಗೆ ಲಕ್ಷಾಂತರ ಬೆಲೆ ಹಾಕಿರುವ ಪ್ರಕರಣಗಳವರೆಗೂ ನಾವು ಸಾಕಷ್ಟು ಕಂಡಿದ್ದೇವೆ. ಜನರ ಕೌತುಕ ಮತ್ತು ಫ್ಯಾಷನ್ ಕ್ರೇಜ್‌ನ್ನು ಬಳಸಿಕೊಂಡು ಕಂಪನಿಗಳು ದುಡ್ಡು ಮಾಡುವ ಹೊಸ ಪ್ರಯೋಗಗಳೇ ಇವು.

ಈ ಪಟ್ಟಿಗೆ ಇದೀಗ ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಬ್ಯಾಲೆನ್ಸಿಯಾಗಾ ತಂದಿರುವ “ದಿ ಝೀರೋ” ಶೂ ಕೂಡ ಸೇರಿದೆ. ಇದು ಶೂ ಹೋಲಿಕೆಯ ಫುಟ್‌ವೇರ್ ಆಗಿದ್ದು, ಧರಿಸಿದಾಗ ಬರೀ ಕಾಲಿನಲ್ಲಿ ನಡೆಯುವ ಅನುಭವ ಕೊಡುತ್ತದೆ. EVA ಫೋಮ್ ತಂತ್ರಜ್ಞಾನ ಹೊಂದಿರುವುದರಿಂದ, ಕಲ್ಲು-ಮುಳ್ಳುಗಳನ್ನು ತುಳಿದರೂ ನೋವು ಅನುಭವವಾಗುವುದಿಲ್ಲವೆಂಬುದೇ ಇದರ ವಿಶೇಷತೆ. ಆದರೂ ಇದರ ಬೆಲೆ ಕೇಳಿದರೆ ಯಾರಿಗೂ ಶಾಕ್ ಆಗದೇ ಇರದು. ಅಮೇರಿಕಾದಲ್ಲಿ ಇದರ ದರ 450 ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 40,000!

ಹೊಸ ಆವಿಷ್ಕಾರವೆಂಬ ಹೆಸರಿನಲ್ಲಿ ಈ ರೀತಿಯ ದುಬಾರಿ ಉತ್ಪನ್ನಗಳನ್ನು ಜನರಿಗೆ ಮಾರಾಟ ಮಾಡುವುದು ಫ್ಯಾಷನ್ ಜಗತ್ತಿನ ಹೊಸ ತಂತ್ರ ಎಂದು ಹೇಳಬಹುದು. ಆದರೆ ಸಾಮಾನ್ಯ ಗ್ರಾಹಕರಿಗೆ ಇದು ನಿಜವಾಗಿಯೂ ಅಗತ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂತಿಮವಾಗಿ, ಈ ಶೂ ಫ್ಯಾಷನ್ ಪ್ರಿಯರಿಗೆ ಆಕರ್ಷಕವಾದರೂ, ಸಾಮಾನ್ಯ ಜನರಿಗೆ ಇದು ದುಬಾರಿ ಟೋಪಿ ಹಾಕುವ ಪ್ರಯತ್ನವೇ ಆಗಿದೆ.

ಇದನ್ನೂ ಓದಿ