January17, 2026
Saturday, January 17, 2026
spot_img

International Sudoku Day: ಮೆದುಳಿಗೆ ವ್ಯಾಯಾಮ ನೀಡುವ ಆಟದ ಮಹತ್ವ ತಿಳ್ಕೊಳಿ

ಪ್ರತಿ ವರ್ಷ ಸೆಪ್ಟೆಂಬರ್ 9ರಂದು ಅಂತಾರಾಷ್ಟ್ರೀಯ ಸುಡೋಕು ದಿನವನ್ನು ಆಚರಿಸಲಾಗುತ್ತದೆ. ಅಂಕಿಗಳ ಆಟವೆಂದೇ ಖ್ಯಾತಿ ಪಡೆದಿರುವ ಸುಡೋಕು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ, ಅದು ಮೆದುಳಿಗೆ ಉತ್ತಮ ವ್ಯಾಯಾಮ ನೀಡುವ ಸಾಧನವಾಗಿದೆ. ಸಂಖ್ಯೆಗಳ ಹಂಚಿಕೆ ಮತ್ತು ಲಾಜಿಕಲ್ ಚಿಂತನೆ ಅಗತ್ಯವಿರುವ ಈ ಆಟವು ಮಾನಸಿಕ ಚುರುಕುತನವನ್ನು ಹೆಚ್ಚಿಸುತ್ತದೆ.

ಸುಡೋಕು ಜಪಾನ್‌ನಲ್ಲಿ ಹೆಚ್ಚು ಜನಪ್ರಿಯಗೊಂಡರೂ, ಇಂದಿಗೆ ಇದು ವಿಶ್ವದಾದ್ಯಂತ ಲಕ್ಷಾಂತರ ಜನರ ದಿನನಿತ್ಯದ ಆಟವಾಗಿದೆ. ಪತ್ರಿಕೆಗಳಿಂದ ಹಿಡಿದು ಮೊಬೈಲ್ ಆ್ಯಪ್‌ಗಳವರೆಗೆ ಎಲ್ಲೆಡೆ ಇದರ ಲಭ್ಯತೆ ಇದನ್ನು ಎಲ್ಲ ವಯಸ್ಸಿನವರಿಗೂ ತಲುಪಿಸಿದೆ.

ಮೆದುಳಿನ ಒತ್ತಡ ಕಡಿಮೆ ಮಾಡಲು, ಏಕಾಗ್ರತೆಯನ್ನು ಹೆಚ್ಚಿಸಲು ಹಾಗೂ ಸಮಸ್ಯೆ ಪರಿಹಾರ ಕೌಶಲ್ಯವನ್ನು ಬೆಳೆಸಲು ಸುಡೋಕು ಬಹಳ ಸಹಾಯಕ. ದಿನನಿತ್ಯ ಸ್ವಲ್ಪ ಸಮಯ ಈ ಆಟಕ್ಕೆ ಮೀಸಲಿಟ್ಟರೆ ಸ್ಮರಣಾಶಕ್ತಿ ಸುಧಾರಣೆ ಮತ್ತು ಮಾನಸಿಕ ಶಾಂತಿ ದೊರೆಯಬಹುದು. ವಿಶೇಷವಾಗಿ, ತಂತ್ರಜ್ಞಾನ ಯುಗದಲ್ಲಿ ಹೆಚ್ಚು ಸಮಯ ಗ್ಯಾಜೆಟ್‌ಗಳಲ್ಲಿ ಕಳೆಯುವವರಿಗಾಗಿ ಇದು ಆರೋಗ್ಯಕರ ಪರ್ಯಾಯವಾಗಿದೆ.

ನ್ಯೂಜಿಲೆಂಡ್‌ನ ನ್ಯಾಯಾಧೀಶರಾದ ವೇಯ್ನ್ ಗೌಲ್ಡ್ ಅವರು ಈ ಪಜಲ್ ಆಟವನ್ನು 1997 ರಲ್ಲಿ ಪಾಶ್ಚಿಮಾತ್ಯ ಜಗತ್ತಿಗೆ ಮರುಪರಿಚಯಿಸಿದರು. ಈ ಆಟದ ಜನಪ್ರಿಯತೆಯು ಡಿಜಿಟಲ್ ಪ್ರಯತ್ನಗಳಿಂದಾಗಿ 2000 ರ ದಶಕದ ಆರಂಭದಲ್ಲಿ ವಿಶ್ವದಾದ್ಯಂತ ಹರಡಿತು. ಈ ಆಟದ ಜಾಗತಿಕ ಪ್ರಭಾವವನ್ನು ಗುರುತಿಸಿ, ವಿಶ್ವ ಪಜಲ್ ಫೆಡರೇಶನ್ 2013 ರರ ಸೆಪ್ಟೆಂಬರ್ 9 ಅನ್ನು ಅಧಿಕೃತ ಅಂತಾರಾಷ್ಟ್ರೀಯ ಸುಡೊಕು ದಿನವನ್ನಾಗಿ ಘೋಷಿಸಿತು.

ಸೆಪ್ಟೆಂಬರ್ 9 ಏಕೆ?
ಈ ದಿನದಂದು ಸುಡೊಕು ಗ್ರಿಡ್‌ಗೆ ಸಂಬಂಧಿಸಿದ ತರ್ಕವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಸುಡೊಕು ಗ್ರಿಡ್ 9×9 ಅಳತೆಯದ್ದಾಗಿರುತ್ತದೆ ಮತ್ತು 1 ರಿಂದ 9 ರವರೆಗಿನ ಅಂಕಿಗಳನ್ನು ಒಳಗೊಂಡಿರುತ್ತದೆ. ಅದಕ್ಕಾಗಿ ಸೆಪ್ಟೆಂಬರ್ 9ನೇ ತಿಂಗಳ 9ನೇ ದಿನವನ್ನು ಸುಡೋಕು ದಿನವಾಗಿ ಆಚರಿಸಲಾಗುತ್ತದೆ.

Must Read

error: Content is protected !!