Wednesday, September 10, 2025

FOOD | ಸಿಂಪಲ್ ದಾಲ್ ಫ್ರೈ: ಸಖತ್ ಟೇಸ್ಟಿ ರೆಸಿಪಿ, ಒಮ್ಮೆ ಟ್ರೈ ಮಾಡಿ

ಭಾರತೀಯ ಅಡುಗೆಯಲ್ಲಿ ದಾಲ್ ಫ್ರೈಗೆ ವಿಶೇಷ ಸ್ಥಾನವಿದೆ. ಬಿಸಿ ಅನ್ನದ ಜೊತೆ ಅಥವಾ ಚಪಾತಿ, ರೊಟ್ಟಿ ಜೊತೆಗೆ ತಿನ್ನಲು ಇದು ತುಂಬಾ ರುಚಿಕರವಾಗಿರುತ್ತದೆ. ತೊಗರಿ ಬೇಳೆ ಅಥವಾ ಮೂಂಗ್‌ ದಾಲ್ ನಿಂದ ಮಾಡಬಹುದಾದ ಈ ತಿನಿಸು ಸುಲಭವಾಗಿ ತಯಾರಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

ತೊಗರಿ ಬೇಳೆ – 1 ಕಪ್
ಈರುಳ್ಳಿ – 1
ಟೊಮೇಟೊ – 1
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅರಿಶಿಣ – ¼ ಚಮಚ
ಮೆಣಸಿನ ಪುಡಿ – 1 ಚಮಚ
ಗರಂ ಮಸಾಲಾ – ½ ಚಮಚ
ಜೀರಿಗೆ – 1 ಚಮಚ
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

ಮೊದಲು ಬೇಳೆಯನ್ನು ತೊಳೆದು, ಕುಕ್ಕರ್‌ನಲ್ಲಿ 2-3 ವಿಸಿಲ್ ಬರುವಷ್ಟು ಬೇಯಿಸಿಕೊಳ್ಳಿ. ಒಂದು ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ, ಜೀರಿಗೆ, ಕರಿಬೇವು, ಹಸಿಮೆಣಸು ಹಾಕಿ. ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕರಿಯಿರಿ. ಸ್ವಲ್ಪ ಹೊತ್ತಿನ ನಂತರ ಟೊಮೇಟೊ, ಅರಿಶಿಣ, ಮೆಣಸಿನ ಪುಡಿ, ಗರಂ ಮಸಾಲಾ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಬೇಯಿಸಿದ ಬೇಳೆಯನ್ನು ಸೇರಿಸಿ, ಸ್ವಲ್ಪ ನೀರು ಹಾಕಿ 5 ನಿಮಿಷ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

ಇದನ್ನೂ ಓದಿ