Tuesday, September 9, 2025

Travel | ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರೋ ಭಾರತದ ತಾಣಗಳಿವು!

ಭಾರತವು ತನ್ನ ವೈವಿಧ್ಯಮಯ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಮೂಲಕ ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಪ್ರಪಂಚದ ಮೂಲೆಮೂಲೆಗಳಿಂದ ಪ್ರವಾಸಿಗರು ಭಾರತದ ಐತಿಹಾಸಿಕ ಹಾಗೂ ನೈಸರ್ಗಿಕ ತಾಣಗಳನ್ನು ವೀಕ್ಷಿಸಲು ಬರುತ್ತಾರೆ. ವಿಶೇಷವಾಗಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೇ ಭಾರತದತ್ತ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಕಾರಣ. ಈ ತಾಣಗಳು ನಮ್ಮ ದೇಶದ ಸಾಂಸ್ಕೃತಿಕ ವೈಭವವನ್ನು ಮಾತ್ರವಲ್ಲದೆ, ನೈಸರ್ಗಿಕ ಸೌಂದರ್ಯವನ್ನೂ ಜಗತ್ತಿಗೆ ಪರಿಚಯಿಸುತ್ತವೆ.

2025ರ ವೇಳೆಗೆ ಭಾರತದಲ್ಲಿ ಒಟ್ಟು 44 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿವೆ. ಅವುಗಳಲ್ಲಿ 36 ಸಾಂಸ್ಕೃತಿಕ ತಾಣಗಳು, 7 ನೈಸರ್ಗಿಕ ತಾಣಗಳು ಹಾಗೂ 1 ಮಿಶ್ರ ತಾಣ ಸೇರಿವೆ. ಇಡೀ ವಿಶ್ವದಲ್ಲಿ 170ಕ್ಕೂ ಹೆಚ್ಚು ದೇಶಗಳಲ್ಲಿ 1,248 ಯುನೆಸ್ಕೋ ತಾಣಗಳಿದ್ದು, ಅದರಲ್ಲಿ ಭಾರತದ ಪಾಲು ಗಮನಾರ್ಹವಾಗಿದೆ.

ಪ್ರಮುಖ ಸಾಂಸ್ಕೃತಿಕ ತಾಣಗಳು

ಅಜಂತಾ ಮತ್ತು ಎಲ್ಲೋರಾ ಗುಹೆಗಳು, ಹಂಪಿ ಹಾಗೂ ಮಹಾಬಲಿಪುರಂ ಸ್ಮಾರಕ ಗುಂಪುಗಳು, ಖಜುರಾಹೋ, ನಳಂದ, ಕುತುಬ್ ಮಿನಾರ್, ಕೆಂಪುಕೋಟೆ, ಕೋನಾರ್ಕ್ ಸೂರ್ಯ ದೇವಾಲಯ ಮತ್ತು ತಾಜ್ ಮಹಲ್ ಮುಂತಾದವು ಪ್ರಮುಖ ಸಾಂಸ್ಕೃತಿಕ ಪರಂಪರೆಯ ತಾಣಗಳಾಗಿ ಪ್ರಸಿದ್ಧ.

ನೈಸರ್ಗಿಕ ತಾಣಗಳು

ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ, ಕಾಜಿರಂಗ, ನಂದಾದೇವಿ, ಸುಂದರಬನ್ಸ್, ಪಶ್ಚಿಮ ಘಟ್ಟಗಳು, ಖಂಗ್ಚೆಂಡ್ಜೊಂಗಾ ಹಾಗೂ ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನಗಳು ಪ್ರಮುಖ ನೈಸರ್ಗಿಕ ತಾಣಗಳಾಗಿವೆ.

ಇತ್ತೀಚೆ ಸೇರ್ಪಡೆಗೊಂಡ ತಾಣಗಳು

2025ರಲ್ಲಿ ಬುಂದೇಲರ ಅರಮನೆ ಹಾಗೂ ಕೋಟೆಗಳು, ಮೌರ್ಯ ಸಾಮ್ರಾಜ್ಯದ ಅಶೋಕನ ಶಾಸನ, ಭಾರತದ ಮರಾಠಾ ಮಿಲಿಟರಿ ಭೂದೃಶ್ಯಗಳು, ಉತ್ತರ ಭಾರತದಲ್ಲಿರುವ ಗುಪ್ತ ದೇವಾಲಯಗಳು ಹೊಸ ಸೇರ್ಪಡೆಗಳಾಗಿ ಯುನೆಸ್ಕೋ ಪಟ್ಟಿಗೆ ಸೇರಿವೆ.

ರಾಜ್ಯವಾರು ವಿಶೇಷತೆ

ಮಹಾರಾಷ್ಟ್ರ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಯುನೆಸ್ಕೋ ಪರಂಪರೆಯ ತಾಣಗಳನ್ನು ಹೊಂದಿದ್ದು, ಎಲಿಫೆಂಟಾ ಗುಹೆಗಳು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಅಜಂತಾ ಮತ್ತು ಎಲ್ಲೋರಾ ಗುಹೆಗಳು ಪ್ರಮುಖ.

ಜಗತ್ತಿನಲ್ಲಿ ಅಗ್ರ ಸ್ಥಾನ ಪಡೆದ ರಾಷ್ಟ್ರಗಳು

ಇಟಲಿ ದೇಶವು 61 ತಾಣಗಳೊಂದಿಗೆ ವಿಶ್ವದಲ್ಲೇ ಅತಿ ಹೆಚ್ಚು ಯುನೆಸ್ಕೋ ಪರಂಪರೆಯ ತಾಣಗಳನ್ನು ಹೊಂದಿದೆ. ಚೀನಾ 60 ತಾಣಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಜರ್ಮನಿ 55 ತಾಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ