July 12, 2026
Sunday, July 12, 2026
spot_img

ಎಚ್ಚರ.. ಎಚ್ಚರ..! ಆಂಧ್ರಪ್ರದೇಶಕ್ಕೆ ಮತ್ತೆ ಎಂಟ್ರಿ ಕೊಟ್ಟ ಮಹಾಮಾರಿ ಕೊರೊನಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ವರ್ಷಗಳಿಂದ ಸದ್ದಿಲ್ಲದೆ ಅಡಗಿದ್ದ ಕೊರೊನಾ ವೈರಸ್ ಆಂಧ್ರಪ್ರದೇಶದಲ್ಲಿ ಮತ್ತೆ ಜಾಗೃತಗೊಂಡಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಕಡಪ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದಾಗಿ ಇಬ್ಬರು ರೋಗಿಗಳು ಕೊನೆಯುಸಿರೆಳೆದಿದ್ದಾರೆ. ವಿಶೇಷವೆಂದರೆ, 2022ರ ಬಳಿಕ ರಾಜ್ಯದಲ್ಲಿ ವರದಿಯಾದ ಮೊದಲ ಕರೋನಾ ಮರಣ ಪ್ರಕರಣಗಳು ಇವಾಗಿವೆ. ಇದರ ಬೆನ್ನಲ್ಲೇ ನಾಲ್ಕು ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಿದೆ.

ಚಿಕಿತ್ಸೆ ಫಲಿಸದೆ ಇಬ್ಬರು ರೋಗಿಗಳ ದುರ್ಮರಣ

  • ಮೊದಲ ಪ್ರಕರಣ: ಕಡಪ ಮೂಲದ 60 ವರ್ಷದ ವೃದ್ಧರೊಬ್ಬರು ತೀವ್ರ ಅನಾರೋಗ್ಯದ ಕಾರಣ ತಿರುಪತಿಯ ಸ್ವೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಜೂನ್ 28 ರಂದು ಅವರು ಮೃತಪಟ್ಟರು. ಸಾವಿನ ನಂತರದ ಆರ್‌ಟಿ-ಪಿಸಿಆರ್ ವರದಿಯಲ್ಲಿ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.
  • ಎರಡನೇ ಪ್ರಕರಣ: ಮಾಸಪೇಟೆಯ 46 ವರ್ಷದ ವ್ಯಕ್ತಿಯೊಬ್ಬರು ಜ್ವರ, ಕೆಮ್ಮಿನಿಂದಾಗಿ ಜುಲೈ 4 ರಂದು ಕಡಪದ ರಿಮ್ಸ್ ಆಸ್ಪತ್ರೆಗೆ ಸೇರಿದ್ದರು. ಉಸಿರಾಟದ ತೊಂದರೆ ಹೆಚ್ಚಾಗಿ ನಾಲ್ಕು ದಿನಗಳ ಬಳಿಕ ಅವರು ಮೃತಪಟ್ಟಿದ್ದಾರೆ. ಇವರಿಗೆ ಅತಿಯಾದ ಮದ್ಯಪಾನದ ಇತಿಹಾಸವಿದ್ದು, ಶ್ವಾಸಕೋಶದ ಸೋಂಕು ತೀವ್ರಗೊಳ್ಳಲು ಕಾರಣವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ನಾಲ್ವರಿಗೆ ಹೊಸದಾಗಿ ಸೋಂಕು ದೃಢ

ಮೃತರಲ್ಲದೆ ಜಿಲ್ಲೆಯ ವಿವಿಧೆಡೆ ನಾಲ್ಕು ಹೊಸ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿವೆ. ಸೌಮ್ಯ ಲಕ್ಷಣಗಳಿರುವ ಮೂವರನ್ನು ಹೋಮ್ ಐಸೊಲೇಷನ್‌ನಲ್ಲಿ ಇಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ತೀವ್ರ ಲಕ್ಷಣಗಳಿದ್ದ ಮತ್ತೊಬ್ಬ ರೋಗಿಯನ್ನು ರಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಪ್ರಕರಣಗಳು ವರದಿಯಾಗಿರುವುದರಿಂದ ಇಡೀ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !