ಹೊಸದಿಗಂತ ಡಿಜಿಟಲ್ ಡೆಸ್ಕ್:
ದೂರದ ಊರುಗಳಿಗೆ ಪ್ರಯಾಣಿಸುವ ಕೋಲ್ಕತ್ತಾದ ಜನರಿಗೆ ರೈಲು ಮತ್ತು ವಿಮಾನ ಪ್ರಯಾಣಕ್ಕೆ ಪರ್ಯಾಯವಾಗಿ ಈಗ ಐಷಾರಾಮಿ ಬಸ್ ಸೇವೆ ಲಭ್ಯವಿದೆ. ಬೆಂಗಳೂರು, ದೆಹಲಿ, ಚೆನ್ನೈ ಹಾಗೂ ಪುರಿ ನಗರಗಳಿಗೆ ಈ ಹೈಟೆಕ್ ಬಸ್‌ಗಳು ವಾರದ ಎಲ್ಲಾ ದಿನಗಳೂ ಕೋಲ್ಕತ್ತಾದ ಕರುಣಾಮಯಿ ಬಸ್ ಟರ್ಮಿನಸ್‌ನಿಂದ ಸಂಚರಿಸಲಿವೆ.
ಟಿಕೆಟ್ ದರ ಮತ್ತು ಪ್ರಯಾಣದ ಅವಧಿ
ವಿವಿಧ ನಗರಗಳಿಗೆ ನಿಗದಿಪಡಿಸಲಾಗಿರುವ ಅಂದಾಜು ದರ ಮತ್ತು ಸಮಯದ ವಿವರ ಹೀಗಿದೆ:
- ದೆಹಲಿ: ₹2,500 – ₹3,000 (17 ಗಂಟೆ)
- ಬೆಂಗಳೂರು: ₹4,500 (35 ಗಂಟೆ)
- ಚೆನ್ನೈ: ₹4,700 (24 ಗಂಟೆ)
- ಪುರಿ (ವೋಲ್ವೋ): ₹1,500 – ₹2,000 (8 ಗಂಟೆ)
ಬಸ್‌ನಲ್ಲಿರುವ ಹೈಟೆಕ್ ಸೌಲಭ್ಯಗಳು
ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕಾಗಿ ಈ ಬಸ್‌ಗಳಲ್ಲಿ ಬಯೋ ಟಾಯ್ಲೆಟ್, ದಿಂಬು-ಹೊದಿಕೆ, ಮನರಂಜನೆಗಾಗಿ ವೈಯಕ್ತಿಕ ಒಟಿಟಿ (OTT) ಪರದೆಗಳು, ಕುಡಿಯುವ ನೀರು, ಕಾಫಿ-ಟೀ ಹಾಗೂ ಮಿನಿ ಸ್ನ್ಯಾಕ್ ಬಾರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಖಾಸಗಿ ಸಹಭಾಗಿತ್ವಕ್ಕೆ ಮುಕ್ತ ಅವಕಾಶ
ಸಾರಿಗೆ ಸಚಿವ ಅರ್ಜುನ್ ಸಿಂಗ್ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಅವರು ಈ ಸೇವೆಗೆ ಚಾಲನೆ ನೀಡಿದ್ದಾರೆ. ಸಾರಿಗೆ ರಂಗದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಖಾಸಗಿ ಸಂಸ್ಥೆಗಳ ಪಾತ್ರ ಮುಖ್ಯವಾಗಿದ್ದು, ಅವರಿಗೆ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತಿದೆ ಎಂದು ಶಮಿಕ್ ಭಟ್ಟಾಚಾರ್ಯ ತಿಳಿಸಿದ್ದಾರೆ.



