ನಾವು ಸೇವಿಸುವ ಆಹಾರ ನಮ್ಮ ದೇಹಕ್ಕೆ ಶಕ್ತಿ ನೀಡಬೇಕಾದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯಬೇಕು. ಆದರೆ ಊಟ ಮಾಡಿದ ತಕ್ಷಣ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಇಡೀ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
1. ತಕ್ಷಣ ಮಲಗುವ ಹವ್ಯಾಸ ಬೇಡ
ಊಟ ಮುಗಿಸಿದ ತಕ್ಷಣ ಬೆಡ್‌ಗೆ ಜಾರಬೇಡಿ. ಇದರಿಂದ ಆಸಿಡ್ ರಿಫ್ಲಕ್ಸ್ (ಎದೆಯುರಿ) ಮತ್ತು ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಕನಿಷ್ಠ 2 ಗಂಟೆಗಳ ನಂತರವಷ್ಟೇ ಮಲಗಲು ನಿಯಮಿಸಿಕೊಳ್ಳಿ.
2. ಚಹಾ ಅಥವಾ ಕಾಫಿ ಸೇವನೆ ನಿಲ್ಲಿಸಿ
ಊಟದ ತಕ್ಷಣ ಟೀ-ಕಾಫಿ ಕುಡಿಯುವುದರಿಂದ ಅದರಲ್ಲಿರುವ ಟ್ಯಾನಿನ್ ಅಂಶವು ಆಹಾರದಲ್ಲಿನ ಕಬ್ಬಿಣದಂಶವನ್ನು (Iron) ದೇಹ ಹೀರಿಕೊಳ್ಳದಂತೆ ತಡೆಯುತ್ತದೆ. ಇದು ರಕ್ತಹೀನತೆಗೆ ಕಾರಣವಾಗಬಹುದು.
3. ಹಣ್ಣುಗಳನ್ನು ತಕ್ಷಣ ತಿನ್ನಬೇಡಿ
ಹಣ್ಣುಗಳು ಬೇಗ ಜೀರ್ಣವಾಗುತ್ತವೆ, ಆದರೆ ಜಡ ಆಹಾರದ ಜೊತೆ ತಿಂದಾಗ ಅವು ಹೊಟ್ಟೆಯಲ್ಲೇ ಉಳಿದು ಹುದುಗುವಿಕೆ (Fermentation) ಉಂಟಾಗಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು.
4. ಅತಿಯಾಗಿ ನೀರು ಕುಡಿಯಬೇಡಿ
ಊಟದ ಮಧ್ಯೆ ಅಥವಾ ತಕ್ಷಣ ಹೆಚ್ಚು ನೀರು ಕುಡಿದರೆ ಹೊಟ್ಟೆಯಲ್ಲಿನ ಜೀರ್ಣಕಾರಿ ರಸಗಳು ದುರ್ಬಲಗೊಳ್ಳುತ್ತವೆ. ಜೀರ್ಣಕ್ರಿಯೆ ನಿಧಾನವಾಗಿ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುತ್ತದೆ.



