ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದಲ್ಲಿ ಪ್ರತಿಭಟನಕಾರರ ಆಕ್ರೋಶ ಹಿಂಸಾಚಾರಕ್ಕೆ ತಿರುಗಿದ್ದು, ಸಾವು ನೋವಿನ ಸಂಖ್ಯೆಯೂ ಹಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಭಾರತ ಅಲರ್ಟ್ ಆಗಿದೆ. ಭಾರತೀಯರಿಗೆ ದೇಶಾಂಗ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ನೇಪಾಳ ಪ್ರಯಾಣ, ಪ್ರವಾಸ ಮುಂದೂಡಲು ಕೇಂದ್ರ ವಿದೇಶಾಂಗ ಇಲಾಖೆ ಸೂಚಿಸಿದೆ. ನೇಪಾಳದಲ್ಲಿರುವ ಭಾರತೀಯ ರಾಯಭಾರ ಅಧಿಕಾರಿಗಳ ಸಲಹೆ ಪರಿಗಣಿಸಿ ಇದೀಗ ಭಾರತ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ. ಇನ್ನು ನೇಪಾಳದಲ್ಲಿರುವ ಭಾರತೀಯರಿಗೂ ಮಹತ್ವದ ಸೂಚನೆ ನೀಡಲಾಗಿದೆ. ಯಾವುದೇ ಸಂದರ್ಭದಲ್ಲೂ ನೆರವಿನ ಅಗತ್ಯವಿದ್ದರೆ, ಸಹಾಯವಾಣಿಗೆ ಕರೆ ಮಾಡಲು ಸೂಚಿಸಲಾಗಿದೆ.
ಎರಡು ಸಹಾಯವಾಣಿ ಸಂಖ್ಯೆ
+977–980 860 2881
ನೇಪಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರತಿಭಟನೆಯಲ್ಲಿ ಹಲವು ಸಾವು ನೋವುಗಳಾಗಿದೆ. ಘಟನೆ ತೀವ್ರ ನೋವುಂಟು ಮಾಡಿದೆ. ಪ್ರತಿಭಟನೆ ಹಾಗೂ ಹಿಂಸಾಚಾರದಲ್ಲಿ ಮಡಿದ ಕಟುಂಬಕ್ಕೆ ಭಗವಂತ ನೋವು ಭರಿಸವು ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.
ನೇಪಾಳದಲ್ಲಿರುವ ಭಾರತೀಯರು, ನೇಪಾಳಕ್ಕೆ ಪ್ರಯಾಣಿಸುವ ಭಾರತೀಯರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಸದ್ಯಕ್ಕೆ ನೇಪಾಳ ಪ್ರವಾಸ ರದ್ದುಗೊಳಿಸುವಂತೆ ಸೂಚಿಸಿದೆ. ನೇಪಾಳದಲ್ಲಿ ಭಾರತೀಯರಿ ನೆರವಿನ ಅಗತ್ಯವಿದ್ದರೆ ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಲು ಸೂಚಿಸಿದೆ. ಪರಿಸ್ಥಿತಿ ತಿಳಿಗೊಳ್ಳುವ ವರೆಗೆ ನೇಪಾಳ ಭೇಟಿ ಮುಂದೂಡುವಂತೆ ಸೂಚಿಸಲಾಗಿದೆ.