July 21, 2026
Tuesday, July 21, 2026
spot_img

ಕನಸಿನಲ್ಲಿ ಈ ವಸ್ತುಗಳನ್ನು ನೋಡಿದ್ರೆ ಶೀಘ್ರವೇ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂದರ್ಥ!

ರಾತ್ರಿಯಲ್ಲಿ ನಾವು ಬೀಳುವ ಪ್ರತಿಯೊಂದು ಕನಸಿಗೂ ಒಂದು ನಿರ್ದಿಷ್ಟ ಅರ್ಥವಿದೆ. ಸ್ವಪ್ನ ಶಾಸ್ತ್ರವು ಎಲ್ಲಾ ರೀತಿಯ ಕನಸುಗಳನ್ನು ವಿವರಿಸುತ್ತದೆ. ಕೆಲವೊಂದು ಕನಸುಗಳಿಗೆ ಅರ್ಥವೇ ಇಲ್ಲವೇನೋ ಎನಿಸುತ್ತದೆ. ಆದರೆ ಕನಸಿನಲ್ಲಿ ಕಾಣಿಸುವ ವ್ಯಕ್ತಿ, ವಸ್ತು ಹಾಗೂ ಸನ್ನಿವೇಶಗಳಿಗೂ ಅರ್ಥವಿದೆ. ಕೆಲವೇ ಸಮಯದಲ್ಲಿ ನೀವು ಕೆಲಸ ಕಳೆದುಕೊಳ್ಳುತ್ತೀರಿ ಅಥವಾ ಆರ್ಥಿಕ ನಷ್ಟಕ್ಕೆ ತುತ್ತಾಗುತ್ತೀರಿ ಎಂದಾದರೆ ನಿಮಗೆ ಕನಸಿನಲ್ಲಿ ಈ ರೀತಿ ವಸ್ತು ವಿಷಯಗಳು ಕಾಣಿಸುತ್ತವೆ. ಇದನ್ನು ನಿರ್ಲಕ್ಷ್ಯ ಮಾಡದೇ ಆರ್ಥಿಕ ಪ್ರಗತಿಯತ್ತ ಗಮನಕೊಡಿ..

ಕನಸಿನಲ್ಲಿ ಮುಂದೆ ದಾರಿ ಕಾಣದ ಕತ್ತಲ ರೋಡ್‌ ಕಾಣಿಸುತ್ತದೆ. ಈ ರೀತಿ ಇದ್ದಾಗ ತುರ್ತಾಗಿ ಹಣದ ವಿಷಯದಲ್ಲಿ ಯಾವುದೇ ನಿರ್ಧಾರಕ್ಕೆ ಬರಬೇಡಿ. ನಷ್ಟ ಖಂಡಿತ.

ನಿಜ ಜೀವನದಲ್ಲಿ ನೀವು ಯಾವುದೇ ಒಂದು ವಸ್ತುವಿನ ಮೇಲೆ ಖರ್ಚು ಮಾಡೋದಿಲ್ಲ ಎಂದುಕೊಳ್ಳಿ. ಅಂತಹ ವಸ್ತುವನ್ನು ನೀವು ಡಬಲ್‌ ಹಣ ಕೊಟ್ಟು ಕೊಂಡುಕೊಂಡಂತರ ಕನಸು ಬೀಳುತ್ತದೆ. ಉದಾಹರಣೆಗೆ ಸಾವಿರ ರೂಪಾಯಿಗಿಂತ ಹೆಚ್ಚು ಹಣ ಕೊಟ್ಟು ಬ್ಯಾಗ್‌ ಖರೀದಿ ಮಾಡೋದಿಲ್ಲ ಎಂದುಕೊಳ್ಳಿ. ಆದರೆ ಕನಸಿನಲ್ಲಿ ಅದೇ ಬ್ಯಾಗ್‌ನ್ನು ಮೂವತ್ತು ಸಾವಿರ ರೂಪಾಯಿ ಕೊಟ್ಟು ತೆಗೆದುಕೊಂಡಿರುತ್ತೀರಿ.

ಕನಸಿನಲ್ಲಿ ನಿಮ್ಮ ಚಿನ್ನ ಅಥವಾ ಬೆಳ್ಳಿಯ ಆಭರಣಗಳು, ಪದಾರ್ಥಗಳು ಕಳೆದಂತೆ ಅನಿಸಿದರೆ ಈ ಕನಸು ಅಮೂಲ್ಯವಾದ ವಸ್ತುವಿನ ನಷ್ಟ ಮತ್ತು ಹಣದ ನಷ್ಟವನ್ನು ಸಹ ಸೂಚಿಸುತ್ತದೆ.

ಮನೆ ಅಥವಾ ರಸ್ತೆಯಲ್ಲಿ ಹಣದ ರಾಶಿ ಬಿದ್ದಂತೆ ಕಾಣಿಸುವುದು ಉತ್ತಮವಲ್ಲ. ಚದುರಿದ ಹಣವನ್ನು ನೋಡುವುದರಿಂದ ಭವಿಷ್ಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಇದು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು. ನಿಮಗೆ ಅಂತಹ ಕನಸು ಇದ್ದರೆ ನಿಮ್ಮ ಖರ್ಚನ್ನು ನಿಯಂತ್ರಿಸಿ.

ಹಿರಿಯರು ಹೇಳುವಂತೆ ಸದಾ ಪರ್ಸ್‌ನಲ್ಲಿ ಹಣ ಇಡುವ ಅಭ್ಯಾಸ ಮಾಡಿ. ಖಾಲಿ ಪರ್ಸ್‌ ಬಿಡದಿರಿ. ಕನಸಿನಲ್ಲಿ ಖಾಲಿ ಪರ್ಸ್‌ ಕಂಡರೆ ಸದ್ಯದಲ್ಲೇ ನಿಮ್ಮ ಖಜಾನೆ ಖಾಲಿಯಾಗಲಿದೆ ಎಂದರ್ಥ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !