ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 145 ವರ್ಷ ಇತಿಹಾಸ ಹೊಂದಿರುವ ಸರ್ಕಾರಿ ಶಾಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ.
ಹೌದು, ಕಾರವಾರ ತಾಲೂಕಿನ ಚೆಂದಿಯಾದಲ್ಲಿರುವ 145 ವರ್ಷ ಇತಿಹಾಸವಿರುವ ಸರ್ಕಾರ ಶಾಲೆಯಲ್ಲಿ ಎಐ ಬಳಕೆಯಾಗುತ್ತಿದೆ. ಮಕ್ಕಳ ಕಲಿಕಾ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ಎಐ ಬಳಕೆ ಮಾಡಲಾಗುತ್ತಿದೆ.
ಈ ಶಾಲೆಯಲ್ಲಿ ಮೂವತ್ತು ಮಕ್ಕಳಿದ್ದಾರೆ. ಬೋಧನೆಗಾಗಿ ಎಐ ಬಳಕೆ ಮಾಡುತ್ತಿರುವ ರಾಜ್ಯದ ಮೊದಲ ಸರ್ಕಾರಿ ಶಾಲೆ ಇದಾಗಿದೆ. ಶಾಲೆಯ ಶಿಕ್ಷಕರಾದ ಚಂದ್ರಕಾಂತ ಗೌಡ ಮತ್ತು ಜೋಸೆಫಿನ್ ಜಿ. ಲಿಮಾ ಅವರು AI ಆಧಾರಿತ ಶಿಕ್ಷಣ ವೆಬ್‌ಸೈಟ್‌ನ್ನು ರೂಪಿಸಿದ್ದಾರೆ.
https://chandugokarna-bit.github.io/gpt-teachers-resources/
ಈ ವೆಬ್‌ಸೈಟ್‌ನಲ್ಲಿ ಧ್ವನಿ ಹಾಗೂ ದೃಶ್ಯ ಮಾಧ್ಯಮದ ಮೂಲಕ ಪಾಠದ ವಿಷಯಗಳನ್ನು ನೀಡಲಾಗುತ್ತಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳಿಗೆ ಉಪಯುಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಈ ವೆಬ್‌ಸೈಟ್ ಪೋಷಕರಿಗೂ ಸಹಕಾರಿಯಾಗಿದೆ. ತಮ್ಮ ಮಕ್ಕಳು ಏನು ಕಲಿಯುತ್ತಿದ್ದಾರೆ ಎಂಬುದನ್ನು ಗಮನಿಸುವುದರ ಜೊತೆಗೆ, ಅವರು ಗಳಿಸಿರುವ ಜ್ಞಾನವನ್ನು ಪರೀಕ್ಷಿಸುವ ಅವಕಾಶವೂ ಇದರಿಂದ ದೊರೆಯುತ್ತದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಬಿ. ಗುಣಗಿ ತಿಳಿಸಿದ್ದಾರೆ.



