July 23, 2026
Thursday, July 23, 2026
spot_img

ʼತಬಾಹಿʼ ಹಾಡನ್ನು ನೋಡಿದ ಸಿದ್ಧಾರ್ಥ್‌ ಮಲ್ಹೋತ್ರಾ ಏನಂದ್ರು? ಫಸ್ಟ್‌ ರಿಯಾಕ್ಷನ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟಾಕ್ಸಿಕ್‌ ಸಿನಿಮಾದ ಬಹುನಿರೀಕ್ಷಿತ ತಬಾಹಿ ಹಾಡನ್ನು ನೋಡದವರಿಲ್ಲ. ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಯಶ್‌ ಜೊತೆ ರೊಮ್ಯಾಂಟಿಕ್‌ ಆಗಿ ನಟಿಸಿದ್ದಾರೆ. ಹಾಡು ರಿಲೀಸ್‌ ಆದ ಬೆನ್ನಲ್ಲೇ ಕಿಯಾರಾ ಬಗ್ಗೆ ನೆಗೆಟಿವ್‌ ಕಮೆಂಟ್‌ಗಳು ಬಂದಿದ್ದವು. ಈ ಹಾಡನ್ನು ನಿಮ್ಮ ಪತಿ ಸಿದ್ಧಾರ್ಥ್‌ ಮಲ್ಹೋತ್ರಾ ನೋಡಿದ್ದಾರಾ? ಎಂದು ಕಮೆಂಟ್‌ ಮಾಡಿದ್ದರು.

ಇದೀಗ ಸಿದ್ಧಾರ್ಥ್‌ ಹಾಡನ್ನು ನೋಡಿ ಏನು ಹೇಳಿದ್ರು ಎಂದು ಕಿಯಾರಾ ಖುದ್ದಾಗಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿದ್ಧಾರ್ಥ್‌ ಹಾಗೂ ನಾನು ಈ ಹಾಡಿನ ಬಗ್ಗೆ ಬೇಕು ಎಂದು ಕುಳಿತು ಮಾತನಾಡಿಲ್ಲ. ಸಿದ್ಧಾರ್ಥ್‌ ಈ ಹಾಡನ್ನು ನೋಡಿದ್ದಾರೆ ಎಂದು ನನಗೆ ಗೊತ್ತಿತ್ತು. ಬಟ್‌ ಏನೂ ರಿಯಾಕ್ಷನ್‌ ಕೊಟ್ಟಿರಲಿಲ್ಲ. ನಾನೂ ಸುಮ್ಮನಿದ್ದೆ. ಆದರೆ ಈ ಹೇಟ್‌ ಕಮೆಂಟ್ಸ್‌ನ್ನು ನಾನು ತಲೆಗೆ ತೆಗೆದುಕೊಂಡಿದ್ದೆ. ನಟಿಯರು ಸ್ವಲ್ಪ ಹಾಟ್‌ ಆಗಿ ಅಭಿನಯಿಸಿಬಿಟ್ರೆ ಇಷ್ಟೊಂದು ಕೆಟ್ಟ ಕಮೆಂಟ್ಸ್‌ ಮಾಡ್ತಾರಲ್ಲ, ಇದು ಬೇಕಂತ ಮಾಡೋದಲ್ಲ. ಡೈರೆಕ್ಟರ್‌, ಸ್ಕ್ರಿಪ್ಟ್‌ ಹೇಳಿದಂತೆ ನಾವು ಕೇಳ್ತೀವಿ ಅಷ್ಟೆ ಎಂದಿದ್ದಾರೆ.

https://www.instagram.com/reel/Da7GkCGDuHr/?igsh=d2Q2eTd3MDBwdnBs

ಒಂದಿನ ಆನ್‌ಲೈನ್‌ ಹೇಟ್‌ ಕಮೆಂಟ್‌ಗಳನ್ನು ನೋಡಿ ಬೇಸರಿಸಿಕೊಂಡಿದ್ದೆ. ಆಗ ಸಿದ್ಧಾರ್ಥ್‌ ನನ್ನನ್ನು ಸಮಾಧಾನ ಮಾಡಿದ್ರು. ನೀನು ಸಿನಿಮಾ ನಟಿ, ಇದೆಲ್ಲಾ ಕಾಮನ್‌ ಅಲ್ವಾ? ಕೆಟ್ಟ ಕಮೆಂಟ್‌ಗಳಿಗೆ ಬೆಲೆ ಕೊಡಬೇಡ. ನಮ್ಮ ಮದುವೆಯಾದಾಗಲೂ ಒಂದು ಗುಂಪಿನ ಜನ ಕೆಟ್ಟ ಕಮೆಂಟ್ಸ್‌ ಮಾಡಿದ್ರು. ಬಟ್‌ ತಲೆ ಕೆಡಿಸಿಕೊಳ್ಳೋಕೆ ಆಗೋದಿಲ್ಲ. ಎಲ್ಲ ಕೆಲಸ ಅನ್ನೋದನ್ನು ಅರ್ಥ ಮಾಡಿಕೊಂಡರೆ ಆಯ್ತು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !