October 7, 2026
Wednesday, October 7, 2026
spot_img

ಭಾರತ vs ಜಿಂಬಾಬ್ವೆ T20 ಸರಣಿ ಆರಂಭ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು, ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

3 ಪಂದ್ಯಗಳ ರೋಚಕ ಸರಣಿಗೆ ಚಾಲನೆ

ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಚುಟುಕು ಸರಣಿ ಜುಲೈ 23 ರಿಂದ ಅಧಿಕೃತವಾಗಿ ಆರಂಭಗೊಂಡಿದೆ. ಸರಣಿಯ ಮೂರೂ ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲೇ ಜರುಗಲಿದ್ದು, ಕ್ರೀಡಾಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.

ಗೆಲುವಿನ ಹಾದಿಗೆ ಮರಳುವ ನಿರೀಕ್ಷೆ

ಇತ್ತೀಚಿನ ಸತತ ಹಿನ್ನಡೆಗಳ ನಂತರ ಗೆಲುವಿನ ಹಾದಿಗೆ ಮರಳುವುದು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಗುರಿಯಾಗಿದೆ. ನಾಯಕನಾಗಿ ತಮ್ಮ ಚೊಚ್ಚಲ ಗೆಲುವಿನ ಖಾತೆ ತೆರೆಯಲು ಶ್ರೇಯಸ್ ಅಯ್ಯರ್ ಉತ್ಸುಕರಾಗಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದ್ದಾರೆ.

Must Read