July 24, 2026
Friday, July 24, 2026
spot_img

ಕರ್ನಾಟಕದಲ್ಲಿ ಮಾನ್ಸೂನ್ ಕಣ್ಣಾಮುಚ್ಚಾಲೆ: 25 ಜಿಲ್ಲೆಗಳಲ್ಲಿ ತೀವ್ರಗೊಂಡ ಮಳೆ ಅಭಾವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಾದ್ಯಂತ ವಾಡಿಕೆಯ ಮಾನ್ಸೂನ್ ಕ್ಷೀಣಿಸಿದ್ದು, ಬರದ ಛಾಯೆ ಆವರಿಸುತ್ತಿದೆ. ಒಟ್ಟು 31 ಜಿಲ್ಲೆಗಳ ಪೈಕಿ ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ನಿರೀಕ್ಷಿತ ಮಳೆಯಾಗಿದೆ. ಇನ್ನುಳಿದ 25 ಜಿಲ್ಲೆಗಳಲ್ಲಿ ಶೇಕಡಾ 20ಕ್ಕಿಂತಲೂ ಅಧಿಕ ಕೊರತೆ ದಾಖಲಾಗಿದೆ.

ಗರಿಷ್ಠ ಕೊರತೆ ಕಂಡ ಜಿಲ್ಲೆಗಳು

ವಿಜಯನಗರ ಜಿಲ್ಲೆಯಲ್ಲಿ ಶೇ. 60ಕ್ಕೂ ಹೆಚ್ಚಿನ ಅಭಾವ ಎದುರಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಮೈಸೂರು (ಶೇ. -57) ಹಾಗೂ ಹಾವೇರಿ (ಶೇ. -50) ಜಿಲ್ಲೆಗಳು ಸಹ ವಾಡಿಕೆಯ ಅರ್ಧದಷ್ಟು ಮಳೆಯನ್ನೂ ಪಡೆದಿಲ್ಲ.

ಐಎಂಡಿ (IMD) ವರದಿ ಏನು ಹೇಳುತ್ತದೆ?

ಜುಲೈ 22ರ ಅವಧಿಗೆ 392 ಮಿ.ಮೀ. ಬದಲಿಗೆ ಕೇವಲ 253 ಮಿ.ಮೀ. ನೀರು ಬಿದ್ದಿದೆ. ಜೂನ್‌ನಲ್ಲಿ ಶೇ. 42 ಇದ್ದ ಕೊರತೆ, ಪ್ರಸ್ತುತ ಶೇ. 35ಕ್ಕೆ ಬಂದಿಳಿದಿದೆ. ಹವಾಮಾನ ಸಂಸ್ಥೆಯ ಪ್ರಕಾರ, ಶೇ. 20ರವರೆಗಿನ ವ್ಯತ್ಯಾಸವನ್ನು ‘ಸಾಮಾನ್ಯ’ ಎಂದೂ, ಶೇ. 20ಕ್ಕಿಂತ ಹೆಚ್ಚಿನ ಅಭಾವವನ್ನು ‘ಕಡಿಮೆ’ ಹಾಗೂ ಶೇ. 60ಕ್ಕೂ ಮೀರಿದರೆ ‘ಅತ್ಯಂತ ಕಡಿಮೆ’ ಎಂದು ಪರಿಗಣಿಸಲಾಗುತ್ತದೆ.

ಮಳೆ ಕೈಕೊಡಲು ಕಾರಣಗಳೇನು?

ಅರಬ್ಬಿ ಸಮುದ್ರ ಭಾಗದಲ್ಲಿ ವಾಯುವಿನ ಗತಿ ದುರ್ಬಲಗೊಂಡಿರುವುದು ಹಾಗೂ ಬಂಗಾಳ ಕೊಲ್ಲಿಯಲ್ಲಿ ಅಗತ್ಯ ಮುಂಗಾರು ವಾಯುಭಾರ ಕುಸಿತಗಳು ಉಂಟಾಗದಿರುವುದೇ ಈ ತೀವ್ರ ಬರಸ್ಥಿತಿಗೆ ಮುಖ್ಯ ಕಾರಣ ಎಂದು ಹವಾಮಾನ ವಿಶ್ಲೇಷಕರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !