October 7, 2026
Wednesday, October 7, 2026
spot_img

WEATHER | ಸಿಡಿಲು-ಬಿರುಗಾಳಿ ಸಹಿತ ವರುಣನ ಆರ್ಭಟ: ಜುಲೈ 28 ರವರೆಗೆ ರಾಜ್ಯಾದ್ಯಂತ ಯೆಲ್ಲೋ ಅಲರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯಾದ್ಯಂತ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಜುಲೈ 25 ರಿಂದ ಜುಲೈ 28 ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಬಿರುಸಿನ ಮಳೆಯಾಗುವ ಸಾಧ್ಯತೆ ಇದ್ದು, ಕಟ್ಟೆಚ್ಚರ ವಹಿಸುವಂತೆ ಇಲಾಖೆ ಸಾರ್ವಜನಿಕರಿಗೆ ತಿಳಿಸಿದೆ.‌

ಕರಾವಳಿ ಮತ್ತು ಮಲೆನಾಡಿಗೆಯೆಲ್ಲೋಅಲರ್ಟ್

ಮಳೆಯ ಆರ್ಭಟ ಹೆಚ್ಚಾಗಲಿರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ‘ ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಭೀತಿ ಎದುರಾಗಿದ್ದು, ಜಿಲ್ಲಾಡಳಿತಗಳು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಿವೆ.ಇನ್ನ, ಈ ಭಾಗದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಜುಲೈ 29 ರಂದು ಬಿಡುವು, 30 ಕ್ಕೆ ಮತ್ತೆ ಆರಂಭ:

ಹವಾಮಾನ ವರದಿಗಳ ಪ್ರಕಾರ, ಜುಲೈ 29 ರಂದು ಮಳೆಯ ತೀವ್ರತೆ ಕೊಂಚ ತಗ್ಗಲಿದ್ದು, ರಾಜ್ಯದ ಜನತೆಗೆ ತಾತ್ಕಾಲಿಕ ಬಿಡುವು ಸಿಗಲಿದೆ. ಆದರೆ, ಜುಲೈ 30 ರಿಂದ ಮತ್ತೆ ವರುಣನ ಆರ್ಭಟ ಆರಂಭವಾಗಲಿದ್ದು, ತಿಂಗಳ ಕೊನೆಯವರೆಗೂ ಮಳೆ ಮುಂದುವರಿಯುವ ಲಕ್ಷಣಗಳಿವೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

Must Read