July 26, 2026
Sunday, July 26, 2026
spot_img

ಆತ್ಮಹ*ತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತ್ಯು: ಪತಿಗೂ ಗಂಭೀರ ಗಾಯ

ಹೊಸದಿಗಂತ ವರದಿ ಉತ್ತರಕನ್ನಡ:

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಸಿದ ಮಹಿಳೆಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.

ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರನಗುಡ್ಡ ಗ್ರಾಮದ ಜ್ಯೋತಿ ಜಾಧವ (32) ಎಂಬಾತಳೇ ಸಾವನ್ನಪ್ಪಿದ ಮಹಿಳೆ. ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ತಕ್ಷಣವೇ ಶಿರಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗ್ಗೆ ಮಹಿಳೆ ಸಾವನ್ನಪ್ಪಿದ್ದಾಳೆ.

ಪತ್ನಿಯ ರಕ್ಷಣೆಗೆ ಮುಂದಾಗಿದ್ದ ಪತಿ ಕೃಷ್ಣ ಜಾಧವ ಸಹ ತೀವ್ರ ಗಾಯಗೊಂಡಿದ್ದು ಎರಡು ಕಣ್ಣು ಹಾಗೂ ದೇಹದ ಭಾಗ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟು ಗಾಯವಾಗಿದ್ದು. ಈತನನ್ನು ಸಹ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಮೃತಳ ಸಹೋದರ ಗಣಪತಿ ಎಂಬುವರು ಸಹೋದರಿ ಜ್ಯೋತಿ ಸಾವಿನ ಬಗ್ಗೆ ಸಂಶಯವಿದ್ದು ತನಿಖೆಯಾಗಬೇಕೆಂದು ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !