July 27, 2026
Monday, July 27, 2026
spot_img

‘ನನ್ನ ಸಾವಿಗೆ ಯಾರೂ ಕಾರಣರಲ್ಲ’: ಅಮ್ಮ-ಅಣ್ಣನಿಗೆ ಭಾವನಾತ್ಮಕ ಪತ್ರ ಬರೆದಿಟ್ಟು ವಿದ್ಯಾರ್ಥಿನಿ ಸ್ಯೂಸೈಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಜಲಾಲ್ಪುರ ಗ್ರಾಮದಲ್ಲಿ ಅತ್ಯಂತ ಶೋಚನೀಯ ಘಟನೆಯೊಂದು ಸಂಭವಿಸಿದೆ. ವೈದ್ಯೆಯಾಗಬೇಕೆಂಬ ಕನಸು ಹೊತ್ತಿದ್ದ ಅಂಕಿತಾ ಸಾಂಗ್ಲೆ ಎಂಬ ಯುವತಿ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಯಲ್ಲಿ ನಿರೀಕ್ಷಿತ ಅಂಕ ಪಡೆಯಲಾಗದೆ ತನ್ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾಳೆ.

ಕಡಿಮೆ ಅಂಕದ ಆಘಾತವೇ ಸಾವಿಗೆ ಕಾರಣ

ಶನಿವಾರ ಸಾಯಂಕಾಲ ಸುಮಾರಿಗೆ ಈ ದುರಂತ ಬೆಳಕಿಗೆ ಬಂದಿದೆ. ವೈದ್ಯಕೀಯ ಕೋರ್ಸ್ ಪ್ರವೇಶ ಪರೀಕ್ಷೆಯಲ್ಲಿ ಕೇವಲ 166 ಅಂಕಗಳು ಬಂದಿದ್ದರಿಂದ ಅಂಕಿತಾ ತೀವ್ರ ನಿರಾಸೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಆಕೆಯ ಕುಟುಂಬದ ಮೂಲಗಳು ತಿಳಿಸಿವೆ.

ಕಣ್ಣೀರು ತರಿಸುವ ಡೆತ್‌ನೋಟ್ ಪತ್ತೆ

ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮರಾಠಿ ಭಾಷೆಯಲ್ಲಿ ಬರೆದಿದ್ದ ಸಾವಿನ ಸ್ಯೂಸೈಡ್ ನೋಟ್ ದೊರೆತಿದೆ. ಅದರಲ್ಲಿ, “ನೀವೆಲ್ಲರೂ ನನ್ನನ್ನು ಅಪಾರವಾಗಿ ಪ್ರೀತಿಸಿದ್ದೀರಿ. ಆದರೆ ನಿಮ್ಮ ಕನಸನ್ನು ನನಸು ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ. ಅಮ್ಮ, ನೀನು ನನಗೆ ಉತ್ತಮ ಗೆಳತಿಯಂತೆ ನಿಂತೆ. ಅಣ್ಣ, ನೀನು ಪೋಷಕರಿಗಿಂತ ಹೆಚ್ಚಾಗಿ ನನ್ನನ್ನು ಸಾಕಿ ಬೆಳೆಸಿದೆ. ನನ್ನ ಈ ನಿರ್ಧಾರಕ್ಕೆ ಯಾರೂ ಹೊಣೆಗಾರರಲ್ಲ. ನಾನು NEET ಪರೀಕ್ಷೆಯಲ್ಲಿ ವಿಫಲಳಾಗಿದ್ದೇನೆ, ನನ್ನನ್ನು ಕ್ಷಮಿಸಿ. ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ” ಎಂದು ನೋವಿನಿಂದ ಬರೆದುಕೊಂಡಿದ್ದಾಳೆ.

ಸ್ಥಳೀಯ ಪೊಲೀಸರು ಈ ಕುರಿತು ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !