October 9, 2026
Friday, October 9, 2026
spot_img

ಪ್ರೀತಿಯನ್ನು ನೋಡುವ ದೃಷ್ಟಿಕೋನವೇ ಬದಲಾಯ್ತು! ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಮುಸಾಫಿರ್‌ ಕೆಫೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಭಿನ್ನ ಹಾಗೂ ನೈಜ ಕಥೆಗಳಿಗೆ ಜೀವ ತುಂಬುವ ಬಾಲಿವುಡ್‌ ನಟ ವಿಕ್ರಾಂತ್‌ ಮೆಸ್ಸಿ ಅಭಿನಯದ ಮುಸಾಫಿರ್‌ ಕೆಫೆ ಸೀರೀಸ್‌ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಿದೆ.ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸೀರೀಸ್‌ ಫೇಮಸ್‌ ಆಗಿದ್ದು, ಗಿಜಿಗಿಜಿ, ಗಲಾಟೆ, ಗನ್‌, ಹೊಡೆದಾಟ ಬಿಟ್ಟು ಒಂದೊಳ್ಳೆ ಪ್ರೇಮಕಥೆಯುಳ್ಳ ಸೀರೀಸ್‌ ನೋಡಿ ಖುಷಿ ಪಟ್ಟಿದ್ದಾರೆ.

ಒಟ್ಟಾರೆ ಎರಡು ಗಂಟೆಗಳ ಸೀರೀಸ್‌ ಇದಾಗಿದ್ದು, ವಿಕ್ರಾಂತ್‌ ಮೆಸ್ಸಿ, ವೇದಿಕಾ ಪಿಂಟೋ, ಮಹಿಮಾ ಮಕ್ವಾನ, ರಾಜೀವ್‌ ಸಿದ್ಧಾರ್ಥ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಎಕ್ಸ್‌ ಗರ್ಲ್‌ಫ್ರೆಂಡ್‌ ಸುಧಾ ಹಾಗೂ ಕರೆಂಟ್‌ ಗರ್ಲ್‌ಫ್ರೆಂಡ್‌ ಪ್ರೀತಿ ಹಾಗೂ ಚಂದರ್‌ ನಡುವೆ ನಡೆಯುವ ಕಥೆ ಇದಾಗಿದೆ. ಡಿಸಿಪ್ಲಿನ್‌ ಜೀವನದಲ್ಲಿ ಬಿರುಗಾಳಿಯಂತೆ ಬಂದು ಚಂದರ್‌ ಜೀವನವನ್ನು ಬದಲಾಯಿಸುವ ಸುಧಾ, ಕನಸುಗಳಿಗೆ ಹೆಗಲುಕೊಟ್ಟ ಜೊತೆ ನಡೆಯುವ ಪ್ರೀತಿ! ಇವರಿಬ್ಬರ ನಡುವೆ ಯಾರನ್ನು ಚಂದರ್‌ ಆರಿಸುತ್ತಾರೆ ಎನ್ನುವ ಕಥೆ ಇದೆ.

ತನ್ನದೇ ಜೀವನದ ಒಂದು ಅಂಶವನ್ನೂ ಕಾಂಪ್ರಮೈಸ್‌ ಮಾಡಿಕೊಳ್ಳಲು ರೆಡಿ ಇಲ್ಲದ ಸುಧಾ, ಚಂದರ್‌ಗಾಗಿ ತನ್ನ ಕನಸುಗಳನ್ನು ಬದಲಾಯಿಸಲು ತಯಾರಾಗಿರುವ ಪ್ರೀತಿ, ಬೆಟ್ಟಗಳ ಸೌಂದರ್ಯದ ನಡುವೆ ಶೂಟ್‌ ಎಲ್ಲವನ್ನು ನೋಡೋದಕ್ಕೆ ಖುಷಿಯಾಗಿದೆ ಎಂದು ಫ್ಯಾನ್ಸ್‌ ಅಭಿಪ್ರಾಯಪಟ್ಟಿದ್ದಾರೆ. ಐಡಿಎಂಬಿಯಲ್ಲಿ ಮುಸಾಫಿರ್‌ ಕೆಫೆಗೆ 7.9 ರೇಟಿಂಗ್‌ ಸಿಕ್ಕಿದೆ.

Must Read