ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯ ಜೊತೆ ಅಸಭ್ಯವಾಗಿ ವರ್ತನೆ ಮಾಡಿರುವ ಆರೋಪದ ಮೇಲೆ ಹೆಡ್‌ಕಾನ್ಸ್‌ಟೇಬಲ್‌ಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಗಂಗಮ್ಮನ ಗುಡಿ ಸರ್ಕಲ್ ಬಳಿ ನಡೆದಿದೆ.
ಸಂಜಯ್ ನಗರ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಮಂಜುನಾಥ್ ಮೇಲೆ ಹಲ್ಲೆ ನಡೆದಿದೆ. ಜಾಲಹಳ್ಳಿಗೆ ತೆರಳಲು ಬಸ್ ಹತ್ತಿದ್ದ ಮಂಜುನಾಥ್ ಮಹಿಳೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಮಹಿಳೆ ಕೂಗಿ ರಂಪಾಟ ಮಾಡಿದ್ದು, ಸಂಬಂಧಿಕರಿಗೆ ಕರೆ ಮಾಡಿ ಗಂಗಮ್ಮನ ಗುಡಿ ಸರ್ಕಲ್ ಬಳಿ ಕರೆಸಿಕೊಂಡಿದ್ದರು.
ಬಸ್‌ನಿಂದ ಮಂಜುನಾಥ್ ಅವರನ್ನು ಕೆಳಕ್ಕೆ ಇಳಿಸಿ ಹಲ್ಲೆ ನಡೆಸಲಾಗಿದೆ. ಪೊಲೀಸ್ ಎಂದು ಹೇಳಿದರೂ ಬಿಡದೇ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ. ಮುಖ, ಮೈಕೈಗೆ ಗಾಯಗಳಾಗಿವೆ. ಮಹಿಳೆ ಹಾಗೂ ಪೊಲೀಸ್ ಇಬ್ಬರೂ ದೂರು ಪ್ರತಿದೂರು ದಾಖಲಿಸಿದ್ದಾರೆ.



