October 9, 2026
Friday, October 9, 2026
spot_img

ಮದುವೆಯಾದ ನಾಲ್ಕೇ ತಿಂಗಳಿಗೆ ಬಾಲಿವುಡ್‌ ಸಿಂಗರ್‌ ಬಾದ್‌ಶಾ ವೈವಾಹಿಕ ಜೀವನದಲ್ಲಿ ಡಿವೋರ್ಸ್‌ ಬಿರುಗಾಳಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಖ್ಯಾತ ರ‍್ಯಾಪರ್ ಹಾಗೂ ಸಿಂಗರ್‌ ಬಾದ್‌ಶಾ ವೈವಾಹಿಕ ಜೀವನ ಸದ್ದಿಲ್ಲದಂತೆಯೇ ಬೀದಿಗೆ ಬಂದಿದೆ. ಮದುವೆಯಾದ ನಾಲ್ಕೇ ತಿಂಗಳಿಗೆ ಬಾದ್‌ಶಾ ಹಾಗೂ ಪತ್ನಿ ಇಶಾ ರಿಖಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದು, ಶೀಘ್ರದಲ್ಲೇ ಡಿವೋರ್ಸ್‌ ಸಾಧ್ಯತೆ ಇದೆ ಎನ್ನುವ ವದಂತಿಗಳು ಹರಿದಾಡುತ್ತಿವೆ.

ಈ ಮಧ್ಯೆ ಬಾದ್‌ಶಾ ಪತ್ನಿ ಇಶಾ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ ಒಂದು ವೈರಲ್‌ ಆಗುತ್ತಿದೆ.

https://www.instagram.com/p/DbTM1g1KtmH/?utm_source=ig_embed&ig_rid=A4W5iaSqHIB3tVULTMmawwx

ಪೋಸ್ಟ್‌ನಲ್ಲೇನಿದೆ?
ಕೆಲವೊಂದು ಯುದ್ಧದಲ್ಲಿ ಕಣ್ಣಿಗೆ ಕಾಣುವಂತಹ ಗಾಯಗಳು ಆಗೋದಿಲ್ಲ. ನನ್ನ ಗಂಡನ ಇನ್ಫ್ಲೂಯೆನ್ಸ್‌, ಪವರ್‌ನಿಂದ ಭಯವಿತ್ತು. ಮಾತನಾಡೋಕೂ ಹೆದರುತ್ತಿದ್ದೆ. ಮೌನವಾಗಿಬಿಟ್ಟಿದ್ದೆ. ಆ ಸಮಯದಲ್ಲಿ ತಿರುಗಿ ಮಾತನಾಡುವುದಕ್ಕಿಂತ ಮೌನವಾಗಿರುವುದು ಲೇಸು ಎನಿಸಿತ್ತು. ಆದರೆ ಅದು ನನ್ನ ದೌರ್ಬಲ್ಯ ಅಲ್ಲ. ಮೌನ ಅಂದ್ರೆ ಸಮ್ಮತಿ ಅಲ್ಲ, ನಾನು ಬದುಕನ್ನು ಆರಿಸಿದ್ದು ಅಷ್ಟೆ. ಆದರೆ ಇಂದು ಭಯದ ಮುಂದೆ ಧೈರ್ಯವನ್ನು ಆರಿಸುತ್ತಿದ್ದೇನೆ. ಇಡೀ ಕಥೆಯನ್ನು ಹೇಳೋಕೆ ಆಗದಿದ್ದರೂ ಎಲ್ಲವೂ ಸರಿಯಿದೆ ಎಂದು ನಾಟಕವಾಡೋದಿಲ್ಲ ಎಂದಿದ್ದಾರೆ.

Must Read