ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ, ಮಾತು ಬಾರದ ಕಿವಿಯೂ ಕೇಳದ 26ರ ಹರೆಯದ ಗರ್ಭಿಣಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕಾನ್ಪುರದ ಹಮೀರ್‌ಪುರದಲ್ಲಿ ನಡೆದಿದೆ.
ಈ ಹಿಂದೆಯೂ ಕಾಮುಕರು ಅತ್ಯಾಚಾರವೆಸಗಿದ್ದ ಪರಿಣಾಮವಾಗಿಯೇ ಆಕೆ ಗರ್ಭಿಣಿ ಆಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಹೊಲಕ್ಕೆ ಕರೆದೊಯ್ದ ಆರೋಪಿಗಳು ಆಕೆಗೆ ಗರ್ಭಪಾತವಾಗುವುದಕ್ಕೆ ಮಾತ್ರೆ ನೀಡಿದ್ದಾರೆ ನಂತರ ಮತ್ತೆ ಅತ್ಯಾಚಾರವೆಸಗಿದ್ದಾರೆ. ಇದರಿಂದ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆಕೆಯನ್ನು ಕಾನ್ಪುರದ ಲಾಲ್ ಜಲಪತ್ ರಾಯ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.
ಭಾನುವಾರ ಸಂಜೆ ಆಕೆಯ ಗ್ರಾಮದವರೇ ಆಕೆಗೆ ಗರ್ಭಪಾತ ಮಾತ್ರ ನೀಡಿ ಅತ್ಯಾಚಾರವೆಸಗಿದ್ದರು. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಆದರೆ ಬುಧವಾರ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಂಕಿತ ಇಬ್ಬರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಈ ಮಹಿಳೆಗೆ ವಿವಾಹವಾಗಿತ್ತು. ವಿವಾಹದ ನಂತರ ಗಂಡನ ಮನೆಯಲ್ಲಿ ಅತ್ತೆ ಮಾವನೊಂದಿಗೆ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಆಕೆ ತನ್ನ ತವರಿಗೆ ಬಂದು ವಾಸ ಮಾಡುತ್ತಿದ್ದಳು.