July 30, 2026
Thursday, July 30, 2026
spot_img

ನಿವೃತ್ತ ಸರ್ಕಾರಿ ಬಸ್‌ ಚಾಲಕನ ಮನೆಯಲ್ಲಿತ್ತು 15 ಕೆಜಿ ಬಂಗಾರ, ಹಣ ಎಣಿಸಿ ಎಣಿಸಿ ಸುಸ್ತಾದ ಅಧಿಕಾರಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಂಗಾಳದ ಬಿರ್ಭಮ್‌ನಲ್ಲಿ ನಿವೃತ್ತ ಸರ್ಕಾರಿ ಬಸ್‌ ಚಾಲಕನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸಂಪತ್ತನ್ನು ನೋಡಿ ದಂಗಾಗಿದ್ದಾರೆ!

ಹೌದು, ಮರಳು ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಬಸ್‌ಚಾಲಕನಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದು ಇದೀಗ ಕಲ್ಲು ವ್ಯಾಪಾರಿಯಾಗಿರುವ ಮಿನಾರ್‌ ಮನೆಗೆ ದಾಳಿ ನಡೆಸಿದ್ದಾರೆ. ಮನೆಯಲ್ಲಿ ಬೆಳ್ಳಿ, ಬಂಗಾರ ಹಾಗೂ ನಗದನ್ನು ನೋಡಿ ಶಾಕ್‌ ಆಗಿದ್ದಾರೆ.

ಬಂಗಾಳ ಪೊಲೀಸರು ಕನಿಷ್ಠ 28.5 ಕೋಟಿ ನಗದು, 15 ಚಿನ್ನ ಜಪ್ತಿಮಾಡಿದ್ದಾರೆ. ಜಪ್ತಿ ಮಾಡಿರುವ ಚಿನ್ನದ ಮೌಲ್ಯ ಬರೋಬ್ಬರಿ 20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಿನಾರ್‌ ಹಾಗೂ ಅವರ ಮಗನನ್ನು ಬಂಧಿಸಲಾಗಿದೆ.

ಮಿನಾರ್‌, ಎಸ್ಕೇಪ್‌ ಆಗಿರುವ ಟಿಲ್ಲು ಮೊಂಡಲ್‌ ಅಲಿಯಾಸ್‌ ಮೊಹಮ್ಮದ್‌ ನಜೀಬುದ್ದೀನ್‌ ಅವರ ಸೋದರ ಮಾವ.ಟಿಲ್ಲು ಮಂಡಲ್‌ ಬಿರ್ಭಮ್‌ನ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಅನುಬ್ರತಾ ಮೊಂಡಲ್ ಅವರ ಆಪ್ತ. ಸರ್ಕಾರಿ ಬಸ್‌ ಚಾಲಕನ ವೃತ್ತಿಯಿಂದ ನಿವೃತ್ತಿ ಆದ ಬಳಿಕ ಕಲ್ಲು ವ್ಯಾಪಾರದಲ್ಲಿ ವಹಿವಾಟುಗಳಲ್ಲಿ ಬಲವಾದ ಹಿಡಿತ ಹೊಂದಿದ್ದರು ಎಂದು ಹೇಳಲಾಗ್ತಿದೆ. ಈ ಹಿಂದೆ ಕೂಡ ಮಿನಾರ್‌ ಅವರನ್ನ ದನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಬಹುಕೋಟಿ ಹಗರಣದಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !