ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಇದೀಗ ಪೌರಾಣಿಕ ಸಿನಿಮಾಗಳ ಪರ್ವ ನಡೆಯುತ್ತಿದೆ. ನಿನ್ನೆಯಷ್ಟೇ ಪೌರಾಣಿಕ ಸಿನಿಮಾ ರಾಮಾಯಣದ ಟ್ರೈಲರ್ ರಿಲೀಸ್ ಆಗಿದ್ದು, ಜನ ಪೌರಾಣಿಕ ಸಿನಿಮಾಗಳತ್ತ ಒಲವು ತೋರಿಸುತ್ತಿದ್ದಾರೆ. ಬಾಲಿವುಡ್‌ನ ಪರ್ಫಾಮರ್ ವಿಕ್ಕಿ ಕೌಶಲ್ ವಿಕ್ಕಿ ಕೌಶಲ್ ಸದ್ಯ ಪರಶುರಾಮನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಾಗಿ ವಿಕ್ಕಿ ಬರೋಬ್ಬರಿ 25 ಕೆಜಿ ಹೆಚ್ಚಿಸಿಕೊಳ್ಳಬೇಕಿದೆ.
ಪುರಾಣಗಳಲ್ಲಿ ಪರಶುರಾಮನನ್ನು ಅತ್ಯಂತ ಶಕ್ತಿಶಾಲಿ ಮತ್ತು ದೈತ್ಯ ಪ್ರತಿಭೆಯಾಗಿ ಬಣ್ಣಿಸಲಾಗಿದೆ. ಈ ಪಾತ್ರಕ್ಕೆ ಜೀವ ತುಂಬಲು ವಿಕ್ಕಿ ಕೌಶಲ್ ಭಾರಿ ಕಸರತ್ತು ನಡೆಸಲಿದ್ದಾರೆ. ಮೂರೇ ತಿಂಗಳಿನಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ವಿಕ್ಕಿ ಅಷ್ಟರಲ್ಲಿ ತೂಕ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಚಿತ್ರದಲ್ಲಿ ಪರಶುರಾಮನ ದಿವ್ಯ ಕೊಡಲಿಯನ್ನು ಹಿಡಿದು ಹೋರಾಡುವ ದೃಶ್ಯಗಳಿಗಾಗಿ ಅವರು ಅಗಲವಾದ ಎದೆ ಹಾಗೂ ಬಲಿಷ್ಠ ದೇಹವನ್ನು ಹೊಂದಬೇಕಾಗಿದೆ. ಇದಕ್ಕಾಗಿ ಅವರ ಫಿಟ್‌ನೆಸ್ ಕೋಚ್ ತೇಜಸ್ ಲಾಲಾವಾನಿ ಮತ್ತು ನ್ಯೂಟ್ರಿಷನಿಸ್ಟ್ ಅಲ್ಕೇಶ್ ಶರೋತ್ರಿ ವಿಶೇಷ ತರಬೇತಿ ಹಾಗೂ ಆಹಾರದ ಪ್ಲಾನ್ ಸಿದ್ಧಪಡಿಸಿದ್ದಾರೆ.

ಈ ಹೊಸ ರೂಪಕ್ಕಾಗಿ ವಿಕ್ಕಿ ಕೌಶಲ್ ದಿನನಿತ್ಯದ ಆಹಾರದಲ್ಲಿ 250 ರಿಂದ 500 ಹೆಚ್ಚುವರಿ ಕ್ಯಾಲೊರಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅವರ ಆಹಾರ ಕ್ರಮದಲ್ಲಿ ಡ್ರೈ ಫ್ರೂಟ್ಸ್, ಡೈರಿ ಉತ್ಪನ್ನಗಳು, ಧಾನ್ಯಗಳು ಮತ್ತು ಪ್ರೊಟೀನ್ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಸ್ಕ್ವಾಟ್ಸ್, ಡೆಡ್‌ಲಿಫ್ಟ್ ಮತ್ತು ಬೆಂಚ್ ಪ್ರೆಸ್‌ನಂತಹ ಕಠಿಣ ವ್ಯಾಯಾಮಗಳನ್ನು ಮಾಡಲಿದ್ದಾರೆ. ಈ ಹಿಂದೆ ಛಾವಾ ಸಿನಿಮಾಗಾಗಿ ವಿಕ್ಕಿ ತೂಕ ಹೆಚ್ಚಿಸಿಕೊಂಡಿದ್ದರು.



