August 1, 2026
Saturday, August 1, 2026
spot_img

ರಾಜ್ಯಗಳಿಗೆ ಕೇಂದ್ರದ ಬಂಪರ್ ಕೊಡುಗೆ: 1.09 ಲಕ್ಷ ಕೋಟಿ ರೂ. ತೆರಿಗೆ ಪಾಲು ಬಿಡುಗಡೆ ಮಾಡಿದ ಕೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಗಳ ಹಣಕಾಸು ಸ್ಥಿತಿ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 1.09 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಪಾಲನ್ನು ಬಿಡುಗಡೆ ಮಾಡಿದೆ. ಇದು ಆಗಸ್ಟ್‌ 10ರಂದು ನೀಡಲಾಗುವ ನಿಯಮಿತ ಮಾಸಿಕ ತೆರಿಗೆ ಹಂಚಿಕೆಗೆ ಹೆಚ್ಚುವರಿಯಾಗಿದ್ದು, ರಾಜ್ಯಗಳು ಅಭಿವೃದ್ಧಿ ಕಾಮಗಾರಿಗಳು ಮತ್ತು ಬಂಡವಾಳ ವೆಚ್ಚವನ್ನು ವೇಗಗೊಳಿಸಲು ನೆರವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು ಪಾಲು

ರಾಜ್ಯವಾರು ಹಂಚಿಕೆಯಲ್ಲಿ ಉತ್ತರ ಪ್ರದೇಶಕ್ಕೆ 19,208 ಕೋಟಿ ದೊರೆತಿದ್ದು, ಅತಿ ಹೆಚ್ಚು ಪಾಲು ಪಡೆದ ರಾಜ್ಯವಾಗಿದೆ. ಬಳಿಕ ಬಿಹಾರಕ್ಕೆ 10,845 ಕೋಟಿ, ಮಧ್ಯಪ್ರದೇಶಕ್ಕೆ 8,010 ಕೋಟಿ, ಪಶ್ಚಿಮ ಬಂಗಾಳಕ್ಕೆ 7,866 ಕೋಟಿ ಹಾಗೂ ಮಹಾರಾಷ್ಟ್ರಕ್ಕೆ 7,022 ಕೋಟಿ ಹಂಚಿಕೆ ಮಾಡಲಾಗಿದೆ. ಸಿಕ್ಕಿಂ, ಗೋವಾ ಮತ್ತು ನಾಗಾಲ್ಯಾಂಡ್‌ಗೆ ಕಡಿಮೆ ಪ್ರಮಾಣದ ಪಾಲು ದೊರೆತಿದೆ.

ಇದನ್ನೂ ಓದಿ:

ಅಭಿವೃದ್ಧಿ ವೆಚ್ಚಕ್ಕೆ ಉತ್ತೇಜನ

ರಾಜ್ಯಗಳು ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಕಲ್ಯಾಣ ಯೋಜನೆಗಳು ಮತ್ತು ಸಾರ್ವಜನಿಕ ಸೇವೆಗಳ ವಿಸ್ತರಣೆಗೆ ಅಗತ್ಯ ಹಣಕಾಸು ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಕೇಂದ್ರದ ಹಣಕಾಸು ಕೊರತೆ 3.07 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !