August 2, 2026
Sunday, August 2, 2026
spot_img

ರೈತರ ಮುಖದಲ್ಲಿ ಮಂದಹಾಸ: KRS ನೀರಿನ ಮಟ್ಟ 97 ಅಡಿಗೆ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೃಷ್ಣರಾಜಸಾಗರ (KRS) ಜಲಾಶಯದ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಕಾವೇರಿ ನದಿ ಪಾತ್ರದಲ್ಲಿ ಮಳೆ ಬಿರುಸುಗೊಂಡ ಪರಿಣಾಮ, KRS ಡ್ಯಾಂಗೆ ಅಪಾರ ಪ್ರಮಾಣದ ನೀರು ಒಳಹರಿವಾಗಿ ಹರಿದುಬರುತ್ತಿದೆ.

100 ಅಡಿಯತ್ತ ಕೃಷ್ಣರಾಜಸಾಗರ ನೀರಿನ ಮಟ್ಟ

ಕೇವಲ ಎರಡು ದಿನಗಳ ಹಿಂದೆ ಜಲಾಶಯದ ನೀರಿನ ಮಟ್ಟ 92 ಅಡಿ ಇತ್ತು. ಆದರೆ ಪ್ರಸ್ತುತ ಒಳಹರಿವು ಗಣನೀಯವಾಗಿ ಹೆಚ್ಚಾಗಿರುವುದರಿಂದ ಡ್ಯಾಂ ಮಟ್ಟ ಸದ್ಯ 97 ಅಡಿಗೆ ಏರಿಕೆಯಾಗಿದೆ. ಜಲಾಶಯದ ನೀರು ಶೀಘ್ರದಲ್ಲೇ 100 ಅಡಿಯ ಗಡಿಯನ್ನು ದಾಟುವ ನಿರೀಕ್ಷೆಯಿದೆ.

ಕಾವೇರಿ ಹೋರಾಟಕ್ಕೆ ಸಿಕ್ಕಿತು ತಾತ್ಕಾಲಿಕ ಬ್ರೇಕ್

ನೀರಿನ ಅಭಾವದಿಂದಾಗಿ ಕಾವೇರಿ ನೀರಿಗಾಗಿ ನಡೆಯುತ್ತಿದ್ದ ಹೋರಾಟಗಳು ಮತ್ತು ಕಳವಳಗಳಿಗೆ ಇದೀಗ ಪ್ರಕೃತಿಯೇ ತಾತ್ಕಾಲಿಕ ಬ್ರೇಕ್ ಹಾಕಿದಂತಾಗಿದೆ. ಜಲಾಶಯಕ್ಕೆ ಧಾವಿಸಿ ಬರುತ್ತಿರುವ ಜಲರಾಶಿಯಿಂದಾಗಿ ಜಲಾನಯನ ಪ್ರದೇಶದ ರೈತರು ಹಾಗೂ ಸ್ಥಳೀಯ ಜನರಲ್ಲಿ ಹೊಸ ಆಶಾವಾದ ಮತ್ತು ಸಂತಸ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !