August 2, 2026
Sunday, August 2, 2026
spot_img

ಬಾಕ್ಸ್ ಆಫೀಸ್ ಲೆಕ್ಕಾಚಾರ: ಸಂಭಾವನೆ ಕಡಿತಗೊಳಿಸಿ ಲಾಭಕ್ಕೆ ಕೈಜೋಡಿಸಿದ ಸಲ್ಲು ಭಾಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಹಾಗೂ ಟಾಲಿವುಡ್‌ನ ಯಶಸ್ವಿ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘SVC63’ ಸಿನಿಮಾ ಈಗ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಿಸುತ್ತಿರುವ ಈ ಮಾಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾದ ಶೂಟಿಂಗ್ ವೇಗವಾಗಿ ನಡೆಯುತ್ತಿದ್ದು, ನಟ ಸಲ್ಮಾನ್ ಖಾನ್ ಪಡೆಯುತ್ತಿರುವ ಫೀಸ್ ಬಗ್ಗೆ ಬಿಸಿನೆಸ್ ವಲಯದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ.

ಸಂಭಾವನೆಯಲ್ಲಿ ಭಾರಿ ರಿಯಾಯಿತಿ!

ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಸುಮಾರು 120 ಕೋಟಿ ರೂ.ಗೂ ಹೆಚ್ಚು ಬೇಡಿಕೆ ಇಡುವ ಸಲ್ಮಾನ್, ಈ ವಿಶೇಷ ಪ್ರಾಜೆಕ್ಟ್‌ಗಾಗಿ ತಮ್ಮ ಸಂಭಾವನೆಯನ್ನು ಬಲಿ ನೀಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಅವರು ಈ ಸಿನಿಮಾಗೆ ಕೇವಲ 70 ಕೋಟಿ ರೂ. ಪಡೆಯಲು ಸಮ್ಮತಿಸಿದ್ದಾರೆ. ಇತ್ತೀಚಿನ ಸಿನಿಮಾಗಳ ಮಾರುಕಟ್ಟೆ ಮೌಲ್ಯ ಮತ್ತು ಬಾಕ್ಸ್ ಆಫೀಸ್ ಗಳಿಕೆಯನ್ನು ಗಮನದಲ್ಲಿಟ್ಟುಕೊಂಡು ಸಲ್ಲು ಈ ಹಾದಿ ತುಳಿದಿದ್ದಾರೆ. ಜೊತೆಗೆ, ರಿಲೀಸ್ ನಂತರ ಬರುವ ಲಾಭದಲ್ಲಿ ಪಾಲು ಪಡೆಯುವ ಒಪ್ಪಂದವೂ ಆಗಿದೆ ಎನ್ನಲಾಗುತ್ತಿದೆ.

ಗೆಳೆತನಕ್ಕಾಗಿ ಸಲ್ಲು ಭಾಯ್ ಔದಾರ್ಯ

ಸಲ್ಮಾನ್ ಅವರ ಈ ಬಿಗ್ ನಿರ್ಧಾರದ ಹಿಂದೆ ಅವರ ಆಪ್ತ ಮಿತ್ರ ರಫಿ ಕಾಜಿ ಅವರ ಪಾತ್ರ ದೊಡ್ಡದಿದೆ. ಈ ಪ್ರಾಜೆಕ್ಟ್‌ಗೆ ರಫಿ ಕಾಜಿ ಸಹ-ನಿರ್ಮಾಪಕರಾಗಿದ್ದು, ಸ್ನೇಹಕ್ಕೆ ಬೆಲೆ ನೀಡಿ ಸಲ್ಮಾನ್ ತಮ್ಮ ಸಂಭಾವನೆಯನ್ನು ಇಳಿಸಿಕೊಂಡಿದ್ದಾರೆ. ಸದ್ಯಕ್ಕೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಬಾಕಿಯಿದ್ದರೂ, ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !