ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿವುಡ್ ಸಿನಿಮಾಗಳಿಗೆ ಭಾರತದಲ್ಲಿ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಅದರ ತಾಜಾ ಉದಾಹರಣೆಯಾಗಿ ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ ಹೊರಹೊಮ್ಮಿದೆ. ಬಿಡುಗಡೆಯಾದ ಮೂರು ದಿನಗಳಲ್ಲೇ ಈ ಸಿನಿಮಾ ದಾಖಲೆ ಮಟ್ಟದ ಕಲೆಕ್ಷನ್ ಮಾಡಿ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ.
ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಸಿನಿಮಾ ಭಾರತದಲ್ಲಿ 176.70 ಕೋಟಿ ರೂ. ನಿವ್ವಳ ಹಾಗೂ 211.27 ಕೋಟಿ ರೂ. ಒಟ್ಟು ಕಲೆಕ್ಷನ್ ದಾಖಲಿಸಿದೆ. ಮೊದಲ ದಿನ 60.60 ಕೋಟಿ ರೂ., ಎರಡನೇ ದಿನ 49.35 ಕೋಟಿ ರೂ. ಹಾಗೂ ಮೂರನೇ ದಿನ 66.75 ಕೋಟಿ ರೂ. ಗಳಿಕೆ ಕಂಡಿದೆ.
ಹಲವು ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ
ಮೂರನೇ ದಿನ ಇಂಗ್ಲಿಷ್ ಆವೃತ್ತಿಯೇ ಅತಿ ಹೆಚ್ಚು ಗಳಿಕೆ ದಾಖಲಿಸಿದ್ದು, ಹಿಂದಿ ವರ್ಷನ್ ಕೂಡ ಉತ್ತಮ ಪ್ರದರ್ಶನ ನೀಡಿದೆ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಡಬ್ ಆವೃತ್ತಿಗಳಿಂದಲೂ ಚಿತ್ರಕ್ಕೆ ಉತ್ತಮ ಆದಾಯ ಹರಿದುಬಂದಿದೆ. ಇದರೊಂದಿಗೆ ಭಾರತದಲ್ಲಿ ಅತಿ ದೊಡ್ಡ ಹಾಲಿವುಡ್ ಓಪನರ್ ಎಂಬ ದಾಖಲೆ ಸಿನಿಮಾದ ಪಾಲಾಗಿದೆ.
ಇದನ್ನೂ ಓದಿ:
ಪೈರಸಿ ಸವಾಲಿನ ನಡುವೆಯೂ ಯಶಸ್ಸು
ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪೈರಸಿ ಕಾಟವೂ ಎದುರಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಅನಧಿಕೃತ ಆವೃತ್ತಿ ಹರಿದಾಡಿದರೂ, ಅದರ ಪರಿಣಾಮ ಬಾಕ್ಸ್ ಆಫೀಸ್ ಮೇಲೆ ಹೆಚ್ಚು ಬೀಳಲಿಲ್ಲ. ಟಾಮ್ ಹಾಲೆಂಡ್ ಅಭಿನಯದ ಈ ಸೂಪರ್ ಹೀರೋ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿ ಪ್ರದರ್ಶನ ಮುಂದುವರಿಸಿದೆ.



