October 4, 2026
Sunday, October 4, 2026
spot_img

ಬ್ಯಾಟರ್‌ಗಳ ನಾಡಿನಲ್ಲಿ ಸ್ಪಿನ್ ಧಮಾಕಾ: 17 ರನ್ ನೀಡಿ 5 ವಿಕೆಟ್ ಕಿತ್ತ ರಶೀದ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಅಫ್ಘಾನಿಸ್ತಾನದ ನಕ್ಷತ್ರ ಸ್ಪಿನ್ನರ್ ರಶೀದ್ ಖಾನ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ವಿರುದ್ಧ ಎಂಐ ಲಂಡನ್ ಪರ ಕಣಕ್ಕಿಳಿದ ಅವರು, ಎದುರಾಳಿ ಬ್ಯಾಟರ್‌ಗಳನ್ನು ನಡುಗಿಸಿದರು.

ಕೇವಲ 17 ರನ್‌ಗೆ 5 ವಿಕೆಟ್‌ಗಳ ಶ್ರೇಷ್ಠ ಸಾಧನೆ

ಬ್ಯಾಟರ್‌ಗಳಿಗೆ ಅನುಕೂಲಕರವಾದ ಈ ಟೂರ್ನಿಯಲ್ಲಿ ರಶೀದ್ ಖಾನ್ ತಮ್ಮ ಪೂರ್ತಿ 20 ಎಸೆತಗಳ ಕೋಟಾದಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟು 5 ಪ್ರಮುಖ ವಿಕೆಟ್ ಕಬಳಿಸಿದರು. ಟಿಮ್ ಸೈಫರ್ಟ್, ಜೋಸ್ ಬಟ್ಲರ್, ಹೆನ್ರಿಕ್ ಕ್ಲಾಸೆನ್, ಟಾಮ್ ಮೂರ್ಸ್ ಮತ್ತು ಲಿಯಾಮ್ ಡಾಸನ್ ಅವರಂತಹ ಬಿಗ್ ಹಿಟ್ಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಅಪರೂಪದ ದಾಖಲೆ ಬರೆದ ‘ಸ್ಪಿನ್ ಮಾಂತ್ರಿಕ’

ಸಾಮಾನ್ಯ ಟಿ20ಯಲ್ಲಿ 24 ಎಸೆತಗಳ ಅವಕಾಶವಿದ್ದರೆ, ದಿ ಹಂಡ್ರೆಡ್ ಲೀಗ್‌ನಲ್ಲಿ ಬೌಲರ್‌ಗೆ ಸಿಗುವುದು ಕೇವಲ 20 ಎಸೆತಗಳು ಮಾತ್ರ. 2021ರಲ್ಲಿ ಆರಂಭವಾದ ಈ ಲೀಗ್‌ನ ಪುರುಷರ ವಿಭಾಗದಲ್ಲಿ ಇದುವರೆಗೆ ಕೇವಲ 8 ಬೌಲರ್‌ಗಳು ಮಾತ್ರ 5 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈಗ ಈ ಗಣ್ಯರ ಸಾಲಿಗೆ ರಶೀದ್ ಖಾನ್ ಹೆಮ್ಮೆಯಿಂದ ಸೇರ್ಪಡೆಯಾಗಿದ್ದಾರೆ.

Must Read