August 3, 2026
Monday, August 3, 2026
spot_img

ಎಲ್ಲಾ ಇದ್ದು ಏನೋ ಇಲ್ಲ! ಲೈಫ್‌ನಲ್ಲಿ ಎಲ್ಲಾ ಪರ್ಫೆಕ್ಟ್ ಆಗಿರೋಕೆ ಸಾಧ್ಯನೇ ಇಲ್ಲ ಗುರು

ಲೈಫ್‌ ಅಲ್ಲಿ ಎಲ್ಲ ಸೂಪರಾಗಿದೆ ಮಾರಾಯ್ರೆ… ಒಳ್ಳೆ ಕೆಲ್ಸ ಇದೆ, ಕೈತುಂಬ ಸಂಬಳ ಬರ್ತಿದೆ, ಮನೆ-ಮಠ, ಅಪ್ಪ-ಅಮ್ಮ, ನಂಬೋಕ್ ಒಂದಷ್ಟು ಜನ ಫ್ರೆಂಡ್ಸ್… ಎಲ್ಲ ಚೆನ್ನಾಗೇ ಇದೆ. ಆದ್ರೂ ಯಾಕೋ ಒಳಗೊಳಗೇ ‘ಏನೋ ಕಳೆದುಕೊಂಡಂಗೆ’, ‘ಏನೂ ಸರಿ ಇಲ್ಲ ಅನ್ಸೋ’ ಒಂದು ರೀತಿಯ ಖಾಲಿ-ಖಾಲಿ ಫೀಲಿಂಗ್!” ಇಷ್ಟಕ್ಕೂ ಇತರ ಫೀಲಿಂಗ್ ಯಾಕೆ ಬರುತ್ತೆ ಗೊತ್ತ?

ಬೆಳಿಗ್ಗೆ ಎದ್ದೇಳೋದು, ಕೆಲಸಕ್ಕೆ ಓಡೋದು, ನೈಟ್ ಮಲಗೋದು. ಇದೇ ಕಥೆ ರಿಪೀಟ್ ಆಗ್ತಿದ್ರೆ, ಲೈಫ್ ಮಜಾನೇ ಇರಲ್ಲ. ನಾವು ಮನುಷ್ಯರು, ಮಷಿನ್ ಅಲ್ಲ! ಬದುಕಿನಲ್ಲಿ ಹೊಸತನ, ಹುಮ್ಮಸ್ಸು ಇಲ್ಲದಿದ್ದಾಗ ಎಲ್ಲಾ ಇದ್ದರೂ ‘ವೇಸ್ಟ್’ ಅನ್ಸೋಕೆ ಶುರುವಾಗುತ್ತೆ.

ನಮ್ಮ ಹತ್ತಿರ ಏನೇ ಇದ್ದರೂ, ಪಕ್ಕದ ಮನೆಯವನ ಹೊಸ ಕಾರು ಅಥವಾ ಸೋಷಿಯಲ್ ಮೀಡಿಯಾದಲ್ಲಿ ಬೇರೆಯವರ ಫೋಟೋ ನೋಡಿ, “ನನ್ನ ಹತ್ರ ಇದಿಲ್ವಲ್ಲ” ಅಂತ ಕೊರಗೋದನ್ನ ಅಭ್ಯಾಸ ಮಾಡ್ಕೊಂಡಿರ್ತೀವಿ. ನಮಗಿರೋ ಬೆಲೆ ನಮಗೆ ಗೊತ್ತಾಗಲ್ಲ, ಬೇರೆಯವರ ಲೈಫ್‌ ನೋಡಿ ಕಣ್ಣು ಕುಕ್ಕಿಕೊಳ್ತೀವಿ.

ಆಸೆಪಟ್ಟಿದ್ದೇ ಬೇರೆ, ಮಾಡ್ತಿರೋದೇ ಬೇರೆ ಇದ್ದಾಗ ಮನಸ್ಸು ಸೈಲೆಂಟ್ ಆಗಿ ಸ್ಟ್ರೈಕ್ ಮಾಡುತ್ತೆ. ದೇಹ ಎಲ್ಲೋ ಇರುತ್ತೆ, ಮನಸ್ಸು ಎಲ್ಲೋ ಅಲೆಯುತ್ತಿರುತ್ತೆ. ನಮ್ಮ ಕನಸನ್ನು ನಾವು ಬಿಟ್ಟುಕೊಟ್ಟಾಗ ಈ ‘ಏನೋ ಕೊರತೆ’ ಕಾಡೋದು ಗ್ಯಾರಂಟಿ.

ದುಡ್ಡು-ದೊಡ್ಡಸ್ತಿಕೆ ಸಿಕ್ಕಿರಬಹುದು, ಆದ್ರೆ ದಿನದಲ್ಲಿ ಒಂದು ಹತ್ತು ನಿಮಿಷ ಪ್ರಶಾಂತವಾಗಿ ಕುಳಿತುಕೊಳ್ಳೋಕೆ ನಮಗೆ ಪುರಸೊತ್ತಿಲ್ಲ. ನೆಮ್ಮದಿ ಇಲ್ಲದ ಮೇಲೆ ಎಷ್ಟೇ ಇದ್ದರೂ ಏನೂಇಲ್ಲದ ಹಾಗೇ ಅಲ್ವಾ?

ನೆನಪಿಡಿ.. ಜೀವನದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರೋಕೆ ಸಾಧ್ಯವೇ ಇಲ್ಲ! ಮನುಷ್ಯ ಅಂದ್ಮೇಲೆ ಈ ತರ ಭಾವನೆಗಳು ಬರೋದು ತೀರಾ ಸಹಜ

ಒಂದು ಪುಟ್ಟ ಮಾತು:

ಈ ಫೀಲಿಂಗ್ ಬಂದಾಗ ಒಂದಿಷ್ಟು ಬ್ರೇಕ್ ತಗೊಳ್ಳಿ, ದಿನಾ ಸಂಜೆ ಅರ್ಧ ಗಂಟೆ ನಿಮಗಾಗಿ ಟೈಮ್ ಕೊಡಿ. ಮೊಬೈಲ್ ಪಕ್ಕಕ್ಕಿಟ್ಟು ಸುಮ್ನೆ ಪ್ರಕೃತಿ ನೋಡಿ, ಒಂದೊಳ್ಳೆ ಬಿಸಿ ಚಹಾ- ಕಾಫಿ ಕುಡಿಯಿರಿ. ನಿಮಗಿಷ್ಟವಾದ ಹಾಡು ಕೇಳಿ, ಹಳೇ ಫ್ರೆಂಡ್‌ಗೆ ಕಾಲ್ ಮಾಡಿ ಮನಸ್ಸಾರೆ ಹರಟೆ ಹೊಡಿರಿ, ಅಥವಾ ಸುಮ್ನೆ ಕಣ್ಣು ಮುಚ್ಚಿ ಪ್ರಶಾಂತವಾಗಿ ಕೂರಿ.

ಸಣ್ಣಪುಟ್ಟ ಕೊರತೆಗಳ ನಡುವೆ, ಸಣ್ಣಪುಟ್ಟ ಖುಷಿಗಳನ್ನು ಹುಡುಕಿ ಬದುಕೋದೇ ನಿಜವಾದ ಲೈಫ್! ಮನಸ್ಸಿಗೆ ಕೊಂಚ ಗ್ಯಾಪ್ ಕೊಡಿ, ಎಲ್ಲವೂ ತಾನಾಗಿಯೇ ಸರಿ ಹೋಗುತ್ತೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !