ಹೊಸದಿಗಂತ ವರದಿ ಬೀದರ್:
ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ಆ.3 ರಂದು ಔರಾದ(ಬಿ) ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸುಮಾರು 4 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಔರಾದ(ಬಿ), ಲಾಲಸಿಂಗ್ ತಾಂಡಾ (ಹುಲ್ಯಾಳ), ಗೋಪಿನಾಯಕ್ ತಾಂಡಾ (ಮೆಡಪಳ್ಳಿ), ಪೋಮಾ ತಾಂಡಾ (ಜಂಬಗಿ), ಏಕನಾಥ ತಾಂಡಾ, ರಾಂಪೂರ ತಾಂಡಾ, ಗುರುನಾಥ ತಾಂಡಾ, ಕಂದಗೂಳ, ಬೇಲೂರು (ಎನ್) ಹಾಗೂ ಧರಿ ಹನುಮಾನ ಮಂದಿರ ಸೇರಿದಂತೆ ವಿವಿಧೆಡೆ ರಸ್ತೆ, ಸಿಸಿ ರಸ್ತೆ, ಸಮುದಾಯ ಭವನ, ಕುಡಿಯುವ ನೀರು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಎಕಂಬಾದಲ್ಲಿನ ಬಾಲಕಿಯರ ಪ್ರೌಢ ಶಾಲೆಯಲ್ಲಿ 29 ಲಕ್ಷದ ಹೆಚ್ಚುವರಿ ತರಗತಿ ಕೋಣೆಗಳು, ಪ್ರೌಢ ಶಾಲೆಯಲ್ಲಿ 8 ಲಕ್ಷದ ಡಿಜಿಟಲ್ ಕ್ಲಾಸ್ ರೂಮ್, ಲಾಲಸಿಂಗ್ ತಾಂಡಾದಲ್ಲಿ 30 ಲಕ್ಷದ ತೆರೆದ ಬಾವಿ, ಔರಾದ(ಬಿ) ಕೇದಾರೇಶ್ವರ ಮಂದಿರದ ಬಳಿ 25 ಲಕ್ಷದ ಸಮುದಾಯ ಭವನ, ಗೋಪಿನಾಯಕ್ ತಾಂಡಾದಲ್ಲಿ 4.5 ಲಕ್ಷದ ಸಮುದಾಯ ಭವನ, ಪೋಮಾ ತಾಂಡಾದಲ್ಲಿ 20 ಲಕ್ಷ, ಏಕನಾಥ ತಾಂಡಾದಲ್ಲಿ 30 ಲಕ್ಷ, ರಾಂಪೂರ ತಾಂಡಾದಲದಲಿ 20 ಲಕ್ಷದ ಕುಡಿಯುವ ನೀರಿನ ಕಾಮಗಾರಿಗಳು, ಗುರುನಾಥ ತಾಂಡಾದಲ್ಲಿ 65 ಲಕ್ಷ ಮೊತ್ತದ ಕೇಶವ ತಾಂಡಾದಿಂದ ಗುರುನಾಥ ತಾಂಡಾವರೆಗೆ ರಸ್ತೆ, ಕಂದಗೂಳನಲ್ಲಿ 192.50 ಲಕ್ಷದ ರಸ್ತೆ, ಬೇಲೂರ ಎನ್ ಗ್ರಾಮದಲ್ಲಿ 6.50 ಲಕ್ಷದ ಸಿಸಿ ರಸ್ತೆ, ಲಾಧಾ ಗ್ರಾಮ ವ್ತಾಪ್ತಿಯ ಧರಿ ಹನುಮಾನ ಮಂದಿರದ ಬಳಿ 15 ಲಕ್ಷದ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಔರಾದ(ಬಿ) ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದ್ದೇನೆ. ಈ ದಿಶೆಯಲ್ಲಿ ಜನತೆಗೆ ಅತ್ಯಂತ ಅವಶ್ಯಕವಿರುವ ಕಾಮಗಾರಿಗಳನ್ನು ಕೈಗೊಂಡಿದ್ದು, ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮತ್ತು ಗುಣಮಟ್ಟದಿಂದ ಮಾಡಿಕೊಡಬೇಕೆಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಮಲ್ಲಪ್ಪ ನೇಳಗೆ, ಪ್ರಕಾಶ ಮೇತ್ರೆ, ಮಾಧವ ಮಿಠಾರೆ, ಖಂಡೋಬಾ ಕಂಗಟೆ, ರವೀಂದ್ರ ರೆಡ್ಡಿ, ಬಾಲಾಜಿ ಠಾಕೂರ್, ದೀಪಕ ಸಜ್ಜನಶೆಟ್ಟಿ, ದಯಾನಂದ ಘೂಳೆ, ಕೇರಬಾ ಪವಾರ, ಅಬ್ಜಲ್ ಪಠಾನ್, ಸಂತೋಷ ಪೋಕಲವಾರ, ಬಸವರಾಜ ಹಳ್ಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



