ಹೊಸದಿಗಂತ ವರದಿ ದಾವಣಗೆರೆ:
ನನಗೆ ಸಚಿವ ಸ್ಥಾನ ನೀಡದ್ದಕ್ಕೆ ಮುಖ್ಯಮಂತ್ರಿಗಳು ಕಾರಣ ಹೇಳಬೇಕಿತ್ತು. ಈ ಕಾರಣಕ್ಕೆ ನಿಮಗೆ ಸಚಿವ ಸ್ಥಾನ ತಪ್ಪಿದೆ, ಹೊಸಬರನ್ನು ತೆಗೆದುಕೊಳ್ಳುತ್ತೇವೆ ಅಂತಾ ಹೇಳಿದ್ದರೆ ನಮಗೂ ಖುಷಿ ಇರುತಿತ್ತು ಎಂದು ದಾವಣಗೆರೆಯಲ್ಲಿ ಮಾಜಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಇಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಮುಖ್ಯಮಂತ್ರಿ ತಮಗೆ ಬೇಕಾದಂತೆ ಸಂಪುಟ ರಚನೆ ಮಾಡುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗದ ಬಗ್ಗೆ ಯಾವುದೇ ಬೇಸರವಿಲ್ಲ. ಆದರೆ ಇನ್ನಷ್ಟು ಗೌರವಯುತವಾಗಿ ನಡೆಸಿಕೊಳ್ಳಬಹುದಿತ್ತು. ಸಚಿವ ಸ್ಥಾನ ನೀಡದ ಕಾರಣ ತಿಳಿಸಿದ್ದರೆ ಚೆನ್ನಾಗಿತ್ತು ಎಂದರು.
ಇದನ್ನೂ ಓದಿ:
ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಸುಗಮವಾಗಿ ನಡೆಯಲು ತಮ್ಮವರು ಮಂತ್ರಿಯಾಗಬೇಕೆಂಬ ಆಸೆ ಅಭಿಮಾನಿಗಳಲ್ಲಿ ಸಹಜವಾಗಿ ಇರುತ್ತದೆ. ವೈರಲ್ ಆಗಿರುವ ಆಡಿಯೋದಲ್ಲಿ ನಾನು ಹೈಕಮಾಂಡ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್, ನಮ್ಮ ನಾಯಕರು ಏನಾದರೂ ಹೇಳಿದರೆ, ಅದಕ್ಕೆ ವಿರೋಧಿಸುವ ಅಥವಾ ಪಕ್ಷದ ಇಮೇಜ್ ಗೆ ಧಕ್ಕೆ ತರುವ ವ್ಯಕ್ತಿ ನಾನಲ್ಲ. ಗಾಂಧೀಜಿ, ಕೆಂಪೇಗೌಡರಂತಹ ಮಹಾನ್ ವ್ಯಕ್ತಿಗಳ ಮೇಲೆಯೂ ಆರೋಪ ಬಂದಿವೆ. ಅದರಂತೆ ಈಗ ನನ್ನ ಮೇಲೂ ಬಂದಿದೆ. ನಾನು ಅಂತಹದ್ದೇನೂ ಮಾತನಾಡಿಲ್ಲ. ಸುಖಾಸುಮ್ಮನೆ ನನ್ನ ಹೆಸರು ಎಳೆದು ತರುವುದು ಸರಿಯಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.



