August 6, 2026
Thursday, August 6, 2026
spot_img

ಎಸ್‌ಐಆರ್‌ ಪರಿಷ್ಕರಣೆ: ಶೇ.99.96ರಷ್ಟು ಪೂರ್ಣ, ಉಳಿದ ಒಂದು ಕೋಟಿ ಜನರೆಲ್ಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಆಗಸ್ಟ್‌ ಐದರ ವೇಳೆಗೆ ಶೇ.99.96ರಷ್ಟು ಎನ್ಯುಮರೇಷನ್‌ ಕಾರ್ಯ ಪೂರ್ಣಗೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ತಿಳಿಸಿದ್ದಾರೆ.

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2026ರ ಜೂನ್ 16ರಂದು ಮತದಾರರ ಪಟ್ಟಿಯಲ್ಲಿ ಇದ್ದ 5,54,32,314 ಮತದಾರರಿಗೆ ಎನ್ಯು ಮರೇಷನ್ ಫಾರ್ಮ್ʼಗಳನ್ನು ಮನೆ ಮನೆಗೆ ತಲುಪಿಸಿ, ಅವುಗಳನ್ನು ಮರಳಿ ಪಡೆದು ಡಿಜಿಟಲೀಕರಣ ಮಾಡುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈವರೆಗೆ 5,53,3,75 ಫಾರ್ಮ್‌ಗಳನ್ನು ಡಿಜಿಟಲೀಕರಿಸಲಾಗಿದೆ. ಕೇವಲ 22,977 ಫಾರ್ಮ್‌ಗಳು ಮಾತ್ರ ಬಾಕಿ ಉಳಿದಿದ್ದು, ಇವು ಸಹ ಒಂದು ಅಥವಾ ಎರಡು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು. ಎಸ್‌ಐಆರ್ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 16.3 ಲಕ್ಷಕ್ಕೂ ಹೆಚ್ಚು ಮತದಾರರು ಪತ್ತೆಯಾಗಿಲ್ಲ. ಇವರನ್ನು ಪತ್ತೆಹಚ್ಚುವ ಕಾರ್ಯ ಜಾರಿಯಲ್ಲಿದೆ ಎಂದಿದ್ದಾರೆ.

ಒಟ್ಟು 1.11 ಕೋಟಿ ಮತದಾರರೆಲ್ಲಿ?

ಶೇ. 20.03 ರಷ್ಟು ಮತದಾರರನ್ನು ಗೈರುಹಾಜರಿ, ಸ್ಥಳಾಂತರಗೊಂಡವರು, ಸತ್ತವರು, ನಕಲು/ಈಗಾಗಲೇ ದಾಖಲಾಗಿರುವವರು ಮತ್ತು ಇತರರು ಎಂದು ವರ್ಗೀಕರಿಸಲಾಗಿದೆ, ಉಳಿದಿರುವುದು ಕೇವಲ 22,977 ನಮೂನೆಗಳು ಅಥವಾ ಶೇ. 0.04 ರಷ್ಟು ಮಾತ್ರ ಡಿಜಿಟಲೀಕರಣಕ್ಕೆ ಬಾಕಿ ಉಳಿದಿದೆ. ಈ ವರ್ಗದಲ್ಲಿ 66,64,943 ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು, 16,30,012 ಗೈರುಹಾಜರಾದ ಅಥವಾ ಪತ್ತೆಯಾಗದ ಮತದಾರರು, 16,30,872 ಮೃತ ಮತದಾರರು, ಈಗಾಗಲೇ ಬೇರೆಡೆ ದಾಖಲಾಗಿರುವ 6,89,904 ಮತದಾರರು ಮತ್ತು ಇತರ ಕಾರಣಗಳ ಅಡಿಯಲ್ಲಿ ಪಟ್ಟಿ ಮಾಡಲಾದ 4,88,974 ಪ್ರಕರಣಗಳು ಸೇರಿವೆ.

ಫಾರ್ಮ್‌ ತಿದ್ದುಪಡಿಗೆ ಇನ್ನೆರಡು ದಿನ ಮಾತ್ರ ಅವಕಾಶ

ಸ್ಥಳಾಂತರ ಅಥವಾ ಗೈರು ಪಟ್ಟಿಗೆ ಸೇರಿದವರು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ವಾಸವಾಗಿದ್ದರೆ ಅವರು ಹೊಸ ವಿಳಾಸದಲ್ಲಿ ಫಾರ್ಮ್‌-6 ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಈ ಫಾರ್ಮ್‌ ಬಿಎಲ್‌ಒ ಬಳಿ ಇರುತ್ತದೆ. ಹೋಗೋಕಾಗೋದಿಲ್ಲ ಎನ್ನುವವರು ಆನ್‌ಲೈನ್‌ನಲ್ಲಿಯೂ ಫಾರ್ಮ್‌ ಪಡೆದು ಅರ್ಜಿ ಸಲ್ಲಿಸಬಹುದು. ಆಗಸ್ಟ್‌ ಎಂಟರವರೆಗೂ ಫಾರ್ಮ್‌ ತಿದ್ದುಪಡಿಗೆ ಅವಕಾಶ ಇದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಂಘಟನೆಗಳು ಕೂಡ ಪಟ್ಟಿ ಪರಿಶೀಲಿಸಿ ತಪ್ಪುಗಳಿದ್ದರೆ ತಿಳಿಸಬೇಕು. ಮತದಾರರ ಪಟ್ಟಿಯ ಪರಿಶೀಲನೆಯಲ್ಲಿ ಇದುವರೆಗೆ ಸುಮಾರು 6,79,904‌ ಪುನರಾ ವರ್ತಿತ (ಡೂಪ್ಲಿಕೇಟ್) ಮತದಾರರನ್ನು ಗುರುತಿಸಲಾಗಿದೆ ಎಂದರು.

ನೋ ಮ್ಯಾಪಿಂಗ್‌ ಪ್ರಕರಣಗಳಿಗೆ ನೊಟೀಸ್‌!

ಸುಮಾರು 34.07 ಲಕ್ಷ ನೋ ಮ್ಯಾಪಿಂಗ್ ಪ್ರಕರಣಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಇವುಗಳಲ್ಲಿ 2002ರ ದಾಖಲೆಗಳಿಗೆ ಹೊಂದಾಣಿಕೆಯಾಗದ ಮಾಹಿತಿ, ಸಂಬಂಧಿಕರ ದಾಖಲೆಗಳ ವ್ಯತ್ಯಾಸ, ಅಗತ್ಯ ದಾಖಲೆಗಳು ಲಭ್ಯವಿಲ್ಲದ ಪ್ರಕರಣಗಳು ಸೇರಿವೆ. ಇಂತಹ ಪ್ರಕರಣಗಳಿಗೆ ನಿಯಮಾನುಸಾರ ನೋಟಿಸ್ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಒಟ್ಟು 67 ದೂರುಗಳು ಬಂದಿದ್ದು, ಜುಲೈ 18ರಂದೇ ಸಮಸ್ಯೆ ಸರಿಪಡಿಸಿ, ಜುಲೈ 19ರಂದು ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲಾಗಿದೆ.

ಫಾರಂ-6ಗೆ ಲಾಸ್ಟ್‌ ಡೇಟ್‌ ನಿಗದಿ ಇಲ್ಲ!

ಹೊಸ ಮತದಾರರು ಹಾಗೂ ವಿಳಾಸ ಬದಲಿಸಿಕೊಂಡವರು ಫಾರ್ಮ್-6 ಮೂಲಕ ಯಾವುದೇ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು. 2026ರ ಸೆಪ್ಟೆಂಬರ್ 16ರೊಳಗೆ ಫಾರ್ಮ್-6 ಸಲ್ಲಿಸಿದವರ ಹೆಸರು ಅಕ್ಟೋಬರ್ 17ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಯಾಗಲಿದೆ. ಅದರ ನಂತರ ಸಲ್ಲಿಸುವ ಅರ್ಜಿಗಳನ್ನು ಪೂರಕ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !