Friday, September 12, 2025

ಹೈದರಾಬಾದ್​ನಲ್ಲಿ ಮಳೆ ಅಬ್ಬರ: ಮುಳುಗಿದ ರಾಷ್ಟ್ರೀಯ ಹೆದ್ದಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಚೇತರಿಸಿಕೊಳ್ಳುವ ಮೊದಲೇ, ಬಂಗಾಳಕೊಲ್ಲಿಯಲ್ಲಿ ಉಂಟಾದ ಕಡಿಮೆ ಒತ್ತಡದ ಪರಿಣಾಮ ಭಾಗ್ಯನಗರದಲ್ಲಿ ಭಾರಿ ಮಳೆಯಾಗುತ್ತಿದೆ.

ಇಲ್ಲಿನ ಎಲ್​ ಬಿ ನಗರ, ವನಸ್ಥಲಿಪುರಂ, ಹಯತ್​​ನಗರ, ಅಬ್ದುಲ್ಲಾಪುರಮೆಟ್​ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದ ಹೈದರಾಬಾದ್​ ರಾಷ್ಟ್ರೀಯ ಹೆದ್ದಾರಿ ಹೊಂಡದಂತೆ ಕಂಡುಬಂದಿದೆ.

ರಾಮೋಜಿ ಫಿಲ್ಮ್​ ಸಿಟಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರುಣನ ಅಬ್ಬರವಿದ್ದು, ಹೈದರಾಬಾದ್​-ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಳಕಾಲವರೆಗೆ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ನಗರದಲ್ಲಿ ಗುರುವಾರ ಮಧ್ಯಾಹ್ನದಿಂದ ಆರಂಭವಾದ ಮಳೆ, ಒಂದೇ ದಿನದಲ್ಲಿ 10 ಸೆಂಟಿ ಮೀಟರ್ ಸುರಿದಿದೆ. ಹಯತ್​ನಗರದಲ್ಲಿ ಹೆದ್ದಾರಿ ಜಲಾವೃತವಾಗಿದ್ದು, ನಗರದ ಹೊರ ಭಾಗದ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಸಂಚಾರ ಪೊಲೀಸರು ಟ್ರಾಫಿಕ್​ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ