August 9, 2026
Sunday, August 9, 2026
spot_img

ದಿನಭವಿಷ್ಯ: ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಆರೋಗ್ಯ ಸಮಸ್ಯೆ ಬಗೆಹರಿದು ಮನಸ್ಸಿಗೆ ನೆಮ್ಮದಿ ಸಿಗಲಿದೆ

ಮೇಷ.
ಎಲ್ಲ ವಿಚಾರದಲ್ಲಿ ನಿಮಗಿಂದು ಅನುಕೂಲ. ಧನವೃದ್ಧಿ. ಕಾರ್ಯದಲ್ಲಿ ಯಶಸ್ಸು. ಪ್ರೀತಿ ಸಫಲ. ಆರೋಗ್ಯ ಸಮಸ್ಯೆ ಪರಿಹಾರ. ನೆಮ್ಮದಿ.
ವೃಷಭ
ನಿಮ್ಮನ್ನು ತುಳಿಯಲು ಕೆಲವರ ಯತ್ನ. ಆದರೆ ಅದು ಫಲ ನೀಡದು. ಅವರ ಮುಂದೆಯೇ ಯಶಸ್ಸು ಸಾಽಸುವಿರಿ.
ಮಿಥುನ
ನೀವು ನಿರೀಕ್ಷಿಸದ ಬದಲಾವಣೆ ಸಂಭವ. ಅದನ್ನು ಒಪ್ಪಿಕೊಳ್ಳಿ. ಕುಟುಂಬಸ್ಥರು ಕಿವಿಮಾತು ಹೇಳಿದರೆ ಅದನ್ನು ಪಾಲಿಸುವುದು ವಿಹಿತ.
ಕಟಕ
ಸ್ವಂತ ಉದ್ದಿಮೆ ಯಲ್ಲಿ ಆಂಶಿಕ ಯಶಸ್ಸು. ಅನುಚಿತ ಆಹಾರ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ. ಪ್ರೀತಿಯ ವಿಚಾರದಲ್ಲಿ ಬಿಕ್ಕಟ್ಟು.
ಸಿಂಹ
ಉತ್ಸಾಹ ಹೆಚ್ಚಿಸುವ ಬೆಳವಣಿಗೆ. ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಮೀಪಿಸಿದೆ. ಅದೃಷ್ಟ ಜತೆಗಿದೆ, ಪೂರಕ ಪ್ರಸಂಗ ಸೃಷ್ಟಿಯಾಗಲಿದೆ.
ಕನ್ಯಾ
ಏನೋ ಕಳಕೊಂಡ ಭಾವ ಕಾಡುವುದು. ಭಾವುಕ ಸನ್ನಿವೇಶ ಎದುರಿಸುವಿರಿ. ದೈಹಿಕ ನೋವೂ ಕಾಡಲಿದೆ. ಧ್ಯಾನ, ಯೋಗ ಸಹಕಾರಿ.
ತುಲಾ
ಆತ್ಮೀಯರ ಹಿತಕ್ಕಾಗಿ ಇಂದು ಹೆಚ್ಚು ಗಮನ ಹರಿಸುವಿರಿ. ಕೆಲವು ಏರುಪೇರು ಎದುರಿಸುವ ಪ್ರಸಂಗ ಬಂದೀತು. ಮನೋದೃಢತೆಯಿರಲಿ.
ವೃಶ್ಚಿಕ
ಅದೃಷ್ಟ ನಿಮ್ಮ ಜತೆಗಿರದು. ಎಷ್ಟೇ ಪ್ರಯತ್ನ ಹಾಕಿದರೂ ಸೂಕ್ತ ಫಲ ದೊರಕದು. ಹಣ ಗಳಿಕೆಯ ವಿಚಾರದಲ್ಲೂ ಹಿನ್ನಡೆ ಕಾಣುವಿರಿ.
ಧನು
ದಿನವಿಡೀ ಒತ್ತಡ. ಯಾವುದೇ ಕೆಲಸ ಮುಗಿಸಿದರೂ ಮತ್ತೊಂದು ಕೆಲಸ ಹೆಗಲೇರುತ್ತದೆ.ಅಜೀರ್ಣ ಸಮಸ್ಯೆ ಕಾಡಬಹುದು.
ಮಕರ
ನಿಮ್ಮ ಸಾಮರ್ಥ್ಯ ಅನಾವರಣಗೊಳ್ಳುವ ಪ್ರಸಂಗ ಒದಗೀತು. ಯಾವುದೋ ವಿಷಯ ಮನಸ್ಸಿಗೆ ಕಿರಿಕಿರಿ ತರುತ್ತದೆ. ಆರ್ಥಿಕ ಒತ್ತಡ.
ಕುಂಭ
ಎಲ್ಲ ವಿಧದಲ್ಲೂ ಇಂದು ಸವಾಲಿನ ದಿನ. ಮನಸ್ಸು ಶಾಂತಗೊಳಿಸುವ ಹವ್ಯಾಸದಲ್ಲಿ ತೊಡಗಿ. ಬಂಧುಗಳ ಸಮಸ್ಯೆ ನಿಮ್ಮ ಮೇಲೆ ಎಳೆದುಕೊಳ್ಳದಿರಿ.
ಮೀನ
ಎಂದಿಗಿಂತ ಹೆಚ್ಚು ಕಾರ್ಯದೊತ್ತಡ. ಈಡೇರಿಸಲಾಗದ ಆಶ್ವಾಸನೆ ಯಾರಿಗೂ ಕೊಡಬೇಡಿ. ಆಪ್ತ ಬಂಧು ಜತೆ ಮುನಿಸು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !