August 9, 2026
Sunday, August 9, 2026
spot_img

ಖಾತೆ ಹಂಚಿಕೆಯಲ್ಲಿ ಗೊಂದಲವಿಲ್ಲ, ಸೋಮವಾರವೇ ಎಲ್ಲವೂ ಫೈನಲ್: ಸಚಿವ ಈಶ್ವರ ಖಂಡ್ರೆ

ಹೊಸದಿಗಂತ ವರದಿ ಬಳ್ಳಾರಿ:

ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ, ಸೋಮವಾರವೇ ಎಲ್ಲರಿಗೂ ಖಾತೆ ಹಂಚಿಕೆಯಾಗುವ ವಿಶ್ವಾಸವಿದೆ. ಸಿ.ಎಂ. ಡಿ.ಕೆ.ಶಿವಕುಮಾರ್ ಅವರು ಸಮರ್ಥರಾಗಿದ್ದಾರೆ. ಎಲ್ಲವನ್ನೂ ನಿಭಾಯಿಸಲಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಬಳ್ಳಾರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಸಂಪುಟದಲ್ಲಿ  ಮಹಿಳೆಯರಿಗೆ ಆದ್ಯತೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಮಹಿಳೆಯರಿಗೆ ಆದ್ಯತೆ ನೀಡಿದೆ, ಖಂಡಿತ ಅವರಿಗೂ ಅವಕಾಶ ಸಿಗಲಿದೆ. ಆದರೆ, ಅಂತಿಮ ತೀರ್ಮಾನ ಪಕ್ಷದ ಹೈಮಂಡ್‌ಗೆ ಬಿಟ್ಟಿದ್ದು. ಅವರು ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ನಮ್ಮದು ಶಿಸ್ತಿನ ಪಕ್ಷ, ಎಲ್ಲವನ್ನೂ ನಮ್ಮ ನಾಯಕರು ನಿಭಾಯಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಅವರಿಗೆ ಅಧಿಕಾರವಿಲ್ಲ, ಅವರಿಗೆ ಬೇರೆ ಕೆಲಸವಿಲ್ಲ, ವಿನಾಕಾರಣ ನಿತ್ಯ ಬೆಳಕು ಹರಿದರೆ ಸಾಕು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಲು ಮುಂದಾಗಿದ್ದಾರೆ. ಇದಕ್ಕೆಲ್ಲ ಮಹತ್ವ ನೀಡುವುದು ಬೇಡ, ಮುಂಗಾರು ಕೈಕೊಟ್ಟ ಹಿನ್ನೆಲೆ ಬರ, ಅತಿವೃಷ್ಟಿ ಕುರಿತು ಅಧ್ಯಯನ ಮಾಡಲು ಮುಂದಾಗಿದ್ದೇವೆ. ಸಮಗ್ರ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲೀದ್ದೇವೆ. ನಮ್ಮ ಸರ್ಕಾರ ರೈತರ ಪರವಾಗಿದೆ, ಇದರಲ್ಲಿ ಗೊಂದಲಬೇಡ ಎಂದರು.

ಇದನ್ನೂ ಓದಿ:

ಬಿಜೆಪಿ ಅವರು ಎಸ್ಟು ತಿಪ್ಪರಲಾಗ ಹಾಕಿದರು ಅಧಿಕಾರಕ್ಕೆ ಬರೋಲ್ಲ, ಮತ್ತೆ 2028ಕ್ಕೆ ನಮ್ಮ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ. ಕಾಂಗ್ರೆಸ್‌ನ ಜನಪ್ರಿಯತೆಯನ್ನು ಬಿಜೆಪಿಯವರಿಗೆ ಸಾಗಿಸಲು ಆಗುತ್ತಿಲ್ಲ, ದಿನಕ್ಕೊಂದು ಸುಳ್ಳು ಹೇಳಿಕೆ ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರ ಈ ಆಟ ನಡೆಯೋಲ್ಲ ಎಂದು ಕಿಡಿಕಾರಿದ್ದಾರೆ.

ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮೇಯರ್ ಪಿ. ಗಾದೆಪ್ಪ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಚಾನಾಳ ಶೇಖರ್, ವಿಷ್ಣುವರ್ಧನ್ ಬೋಯಪಾಟೆ ಸೇರಿದಂತೆ ಇತರರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !