Friday, September 12, 2025

Do You Know | ಕೋಳಿ ಬೆಳ್ಳಂಬೆಳಗ್ಗೆನೇ ಯಾಕೆ ಕೂಗುತ್ತೆ ಗೊತ್ತಾ?

ಗ್ರಾಮಾಂತರ ಪ್ರದೇಶಗಳಲ್ಲಿ ಮುಂಜಾನೆ ಎಚ್ಚರವಾದಾಗ ಮೊದಲಾಗಿ ಕೇಳಿಬರುವ ಶಬ್ದವೆಂದರೆ ಹುಂಜದ ಕೂಗು. ಹಕ್ಕಿಗಳ ಚಿಲಿಪಿಲಿಯ ಜೊತೆಗೆ ಕೋಳಿಗಳ ಕೂಗು ದಿನದ ಆರಂಭದ ಸಂಕೇತವೆಂದು ಪರಿಗಣಿಸಲಾಗಿದೆ. ಆದರೆ ಹುಂಜಗಳು ವಿಶೇಷವಾಗಿ ಮುಂಜಾನೆ ಮಾತ್ರವೇ ಏಕೆ ಕೂಗುತ್ತವೆ? ಎಂಬ ಪ್ರಶ್ನೆ ಅನೇಕರ ಮನದಲ್ಲಿ ಮೂಡುತ್ತದೆ.

ಜೈವಿಕ ಗಡಿಯಾರದ ಪ್ರಭಾವ
ಹುಂಜಗಳು ತಮ್ಮ ದೇಹದಲ್ಲಿ ಸಿರ್ಕಾಡಿಯನ್ ರಿದಮ್ ಎನ್ನುವ ಜೈವಿಕ ಗಡಿಯಾರವನ್ನು ಹೊಂದಿರುತ್ತವೆ. ಇದು 24 ಗಂಟೆಗಳ ಚಕ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೂರ್ಯೋದಯದ ಬೆಳಕಿನ ಬದಲಾವಣೆಗೆ ಪ್ರತಿಕ್ರಿಯಿಸಿ ಹುಂಜವನ್ನು ಕೂಗುವಂತೆ ಮಾಡುತ್ತದೆ.

ಬೆಳಕಿಗೆ ಸೂಕ್ಷ್ಮ ಪ್ರತಿಕ್ರಿಯೆ
ಹುಂಜದ ಕಣ್ಣುಗಳು ಬೆಳಕಿಗೆ ಅತಿ ಸೂಕ್ಷ್ಮವಾಗಿರುವುದರಿಂದ ಸೂರ್ಯೋದಯದ ಕ್ಷಣದಲ್ಲೇ ಅವು ಬೆಳಕನ್ನು ಗುರುತಿಸಿ ಕೂಗುತ್ತವೆ.

ಸಾಮಾಜಿಕ ನಡವಳಿಕೆ
ಮುಂಜಾನೆ ಕೂಗುವುದು ಕೇವಲ ಸಮಯದ ಸಂಕೇತವಲ್ಲ, ತನ್ನ ಗುಂಪಿನ ಇತರ ಸದಸ್ಯರಿಗೆ “ದಿನ ಪ್ರಾರಂಭವಾಗಿದೆ” ಎಂದು ಸೂಚಿಸುವ ಒಂದು ಸಾಮಾಜಿಕ ನಡವಳಿಕೆಯೂ ಆಗಿದೆ.

ಹೆಣ್ಣ ಕೋಳಿಯನ್ನು ಆಕರ್ಷಿಸುವ ಉದ್ದೇಶ
ಕೆಲವೊಮ್ಮೆ ಹುಂಜಗಳು ಹೆಣ್ಣ ಕೋಳಿಯನ್ನು ಆಕರ್ಷಿಸಲು ಮುಂಜಾನೆ ಹೆಚ್ಚು ಕೂಗುತ್ತವೆ. ಇದು ಅವುಗಳ ಸಂತಾನೋತ್ಪತ್ತಿ ನಡವಳಿಕೆಗೆ ಸಂಬಂಧಿಸಿದೆ.

ಸಂಪ್ರದಾಯ ಮತ್ತು ಜೀವನ ಚಕ್ರ
ಶತಮಾನಗಳಿಂದ ಕೋಳಿಯ ಕೂಗು ಗ್ರಾಮೀಣ ಜೀವನದ ಭಾಗವಾಗಿದೆ. ರೈತರು ಕೋಳಿ ಕೂಗುವದನ್ನು ದಿನದ ಆರಂಭದ ಸಂಕೇತವೆಂದು ಪರಿಗಣಿಸುತ್ತಿದ್ದರು. ಇದು ನೈಸರ್ಗಿಕ ಹಗಲು-ರಾತ್ರಿಯ ಚಕ್ರವನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ