Friday, September 12, 2025

FOOD | ಮಳೆಗಾಲಕ್ಕೆ ಆರೋಗ್ಯಕರ ಶುಂಠಿ ರಸಂ ರೆಸಿಪಿ! ನೀವೂ ಟ್ರೈ ಮಾಡಿ

ಮಳೆಗಾಲದಲ್ಲಿ ತಂಪು ಹವಾಮಾನದ ಬದಲಾವಣೆಯಿಂದ ಜ್ವರ, ಶೀತ, ಕೆಮ್ಮಿನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಸಂದರ್ಭದಲ್ಲಿ ಬೇಯಿಸಿದ ಆಹಾರ ಸಹ ರುಚಿಕರವಾಗಿ ಕಾಣದೇ, ಆರೋಗ್ಯಕರ ಆಹಾರ ಬೇಕಾಗುತ್ತದೆ. ಹೀಗೆ ಆರೋಗ್ಯ ಮತ್ತು ರುಚಿಯನ್ನು ಎರಡೂ ಒಟ್ಟಿಗೆ ನೀಡುವಂತಹ ಶುಂಠಿ ರಸಂ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ – 3 ಟೀಸ್ಪೂನ್
ಅರಿಶಿನ – ½ ಟೀಸ್ಪೂನ್
ಕರಿಬೇವು – 2 ಎಸಳು
ಟೊಮೆಟೊ – 1 ಅಥವಾ 2
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸು – 1 ಟೀಸ್ಪೂನ್
ಜೀರಿಗೆ – 2 ಟೀಸ್ಪೂನ್
ಶುಂಠಿ – 1 ಇಂಚು ತುಂಡು
ಬೆಳ್ಳುಳ್ಳಿ – 6 ಎಸಳು
ಕೊತ್ತಂಬರಿ ಬೀಜ – ½ ಟೀಸ್ಪೂನ್
ನಿಂಬೆ ರಸ – 3 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ಒಗ್ಗರಣೆಗಾಗಿ:
ಎಣ್ಣೆ – 1-2 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕೆಂಪು ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ಲವಂಗ – 2
ಮೆಂತ್ಯ – ಸ್ವಲ್ಪ

ತಯಾರಿಸುವ ವಿಧಾನ:
ತೊಗರಿಬೇಳೆ ತೊಳೆದು ಕುಕ್ಕರ್‌ನಲ್ಲಿ ಅರಿಶಿನ, ಕರಿಬೇವು, ಟೊಮೆಟೊ, ಬೇಕಾಗುವಷ್ಟು ನೀರು ಹಾಕಿ 4–5 ಸೀಟಿ ಬೇಯಿಸಿ. ಬೇಯಿಸಿದ ಮಿಶ್ರಣವನ್ನು ಬಟ್ಟಲಿನಲ್ಲಿ ಸೋಸಿ, ತೆಳುವಾದ ಬೇಳೆ ನೀರನ್ನು ಬಳಸಬೇಕು.

ಮೆಣಸು, ಜೀರಿಗೆ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಬೀಜಗಳನ್ನು ಪುಡಿಮಾಡಿಟ್ಟುಕೊಳ್ಳಿ

ಈಗ ಸೋಸಿದ ಬೇಳೆ ನೀರಿನ ಪಾತ್ರೆಯನ್ನು ಕಡಿಮೆ ಉರಿಯಲ್ಲಿ ಇಟ್ಟು ಉಪ್ಪು ಸೇರಿಸಿ ಕುದಿಯಲು ಬಿಡಿ. ನಂತರ ತಯಾರಿಸಿದ ಮಸಾಲೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಸಣ್ಣ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಮೆಂತ್ಯ ಹುರಿಯಿರಿ. ನಂತರ ಮೆಣಸಿನಕಾಯಿ, ಕರಿಬೇವು, ಲವಂಗ, ಇಂಗು ಸೇರಿಸಿ ಹುರಿದು ತಯಾರಿಸಿ. ಈ ಒಗ್ಗರಣೆ ರಸಂಗೆ ಸೇರಿಸಿ ಮತ್ತೆ ಚೆನ್ನಾಗಿ ಕುದಿಸಿ.

ಕೊನೆಗೆ ರಸಂಗೆ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಬಿಸಿ ಅನ್ನದ ಜೊತೆ ಸವಿಯಿರಿ.

ಇದನ್ನೂ ಓದಿ