Friday, September 12, 2025

Vastu | ವಾಸ್ತು ಪ್ರಕಾರ ಮನೆಯಲ್ಲಿ ಮೆಟ್ಟಿಲುಗಳು ಯಾವದಿಕ್ಕಿನಲ್ಲಿದ್ರೆ ಒಳ್ಳೆದು

ಭಾರತದ ಪಾರಂಪರಿಕ ಜ್ಞಾನ ಪದ್ಧತಿಗಳಲ್ಲಿ ಒಂದಾದ ವಾಸ್ತುಶಾಸ್ತ್ರವು, ಮನೆ ನಿರ್ಮಾಣ ಮತ್ತು ಅದರ ವಿನ್ಯಾಸದಲ್ಲಿ ಶಕ್ತಿ ಸಮತೋಲನವನ್ನು ಕಾಪಾಡುವ ಮಾರ್ಗಗಳನ್ನು ಸೂಚಿಸುತ್ತದೆ. ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ವಿಶೇಷವಾಗಿ, ಮನೆಯ ಮೆಟ್ಟಿಲುಗಳ ಸ್ಥಾಪನೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ಸೂಚನೆಗಳನ್ನು ವಾಸ್ತುಶಾಸ್ತ್ರದಲ್ಲಿ ವಿವರಿಸಲಾಗಿದೆ.

ಮೆಟ್ಟಿಲುಗಳನ್ನು ಪೂರ್ವದಿಂದ ಪಶ್ಚಿಮಕ್ಕೆ ಅಥವಾ ಉತ್ತರದಿಂದ ದಕ್ಷಿಣಕ್ಕೆ ನಿರ್ಮಿಸುವುದು ಅತ್ಯಂತ ಶುಭಕರ. ಈ ದಿಕ್ಕುಗಳು ಶಕ್ತಿ ಹರಿವಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಆದರೆ ಪಶ್ಚಿಮದಿಂದ ಪೂರ್ವಕ್ಕೆ ಅಥವಾ ದಕ್ಷಿಣದಿಂದ ಉತ್ತರಕ್ಕೆ ಮೆಟ್ಟಿಲುಗಳನ್ನು ನಿರ್ಮಿಸುವುದು ಅಶುಭವೆಂದು ಹೇಳಲಾಗಿದೆ.

ಮೆಟ್ಟಿಲುಗಳ ಸಂಖ್ಯೆ ಕೂಡ ಮಹತ್ವದ್ದಾಗಿದೆ. ಬೆಸ ಸಂಖ್ಯೆಯ ಮೆಟ್ಟಿಲುಗಳು ಶುಭ, ಸರಿಸಂಖ್ಯೆಯ ಮೆಟ್ಟಿಲುಗಳು ಅಶುಭವೆಂದು ವಾಸ್ತು ನಿಯಮಗಳು ಹೇಳುತ್ತವೆ. ಇದೇ ವೇಳೆ ವಕ್ರಾಕಾರದ ಮೆಟ್ಟಿಲುಗಳು ಶಿಫಾರಸು ಮಾಡಲಾಗುವುದಿಲ್ಲ. ನೇರವಾದ ಮೆಟ್ಟಿಲುಗಳು ಮನೆಯಲ್ಲಿ ಉತ್ತಮ ಶಕ್ತಿ ಹರಿವಿಗೆ ಸಹಕಾರಿಯಾಗುತ್ತವೆ ಎಂದು ನಂಬಲಾಗಿದೆ.

ಇದೇ ರೀತಿಯಲ್ಲಿ, ಮೆಟ್ಟಿಲುಗಳನ್ನು ಹತ್ತುವಾಗ ಬಲಗಾಲಿನಿಂದ ಪ್ರಾರಂಭಿಸಿ, ಕೊನೆಗೂ ಬಲಗಾಲಿನಿಂದಲೇ ಮುಗಿಸುವುದು ಲಾಭದಾಯಕವೆಂದು ವಾಸ್ತು ತಿಳಿಸುತ್ತದೆ. ಈ ವಿಧಾನವು ಮನೆಗೆ ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ತರಲು ನೆರವಾಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ