October 5, 2026
Monday, October 5, 2026
spot_img

ದಿನಭವಿಷ್ಯ: ಧನಾತ್ಮಕ ಆಲೋಚನೆಯೊಂದಿಗೆ ದಿನ ಆರಂಭಿಸಿ, ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ

ಮೇಷ
 ಇತರರ ಕೆಟ್ಟ ವರ್ತನೆ ನಿಮ್ಮ ದಿನ ಹಾಳು ಮಾಡಲು ಅವಕಾಶ ಕೊಡಬೇಡಿ. ಹಳೆ ಸ್ನೇಹಿತನ ಭೇಟಿ ಸಂಭವ. ಸ್ವಾಸ್ಥ್ಯ ಸುಧಾರಣೆ.    
ವೃಷಭ
 ನಿಮ್ಮ ಇಷ್ಟಕ್ಕೆ ಹಿರಿಯರ ಸಮ್ಮತಿ. ನಿಮ್ಮ ಅಭೀಷ್ಟ ಈಡೇರಿಕೆ. ಅನ್ಯರ ಜತೆ ಖಾಸಗಿ ವಿಚಾರ ಹಂಚಿಕೊಳ್ಳಬೇಡಿ. ಗುಲ್ಲೆಬ್ಬಿಸಬಹುದು.  
ಮಿಥುನ
ನಿಮ್ಮ ಪಾಲಿಗೆ ಅಚ್ಚರಿಯ ಬೆಳವಣಿಗೆ. ಹತಾಶ ಪರಿಸ್ಥಿತಿ ಕರಗಿ, ಆಶಾವಾದ ಮೂಡಲಿದೆ. ಕ್ಲಿಷ್ಟಕರ ಪರಿಸ್ಥಿತಿ ಒಮ್ಮೆಗೆ ಪರಿಹಾರ ಕಾಣಲಿದೆ.    
ಕಟಕ
   ಕಾಲಮಿತಿಯಲ್ಲಿ ನಿಮ್ಮ ಯೋಜನೆ ಪೂರೈಸಬೇಕಾದ ಒತ್ತಡ.  ಭಾವುಕ ಸನ್ನಿವೇಶದಲ್ಲಿ ನಿಮ್ಮ ದೌರ್ಬಲ್ಯ  ಬಹಿರಂಗವಾದೀತು.              
ಸಿಂಹ
 ವೃತ್ತಿ ಮತ್ತು ಮನೆಯಲ್ಲಿ ನಿಮಗೆ ಪೂರಕ ವಾತಾವರಣ. ಒತ್ತಡ ನಿವಾರಣೆ. ಕಷ್ಟವಾದರೂ ಕಾರ್ಯ ಸಂಪೂರ್ಣ.        
ಕನ್ಯಾ
ವೃತ್ತಿಯಲ್ಲಿ ಉನ್ನತಿ. ನಿಮ್ಮ ಪ್ರಗತಿಗೆ ಇದ್ದ ಅಡ್ಡಿ ನಿವಾರಣೆ. ಆರೋಗ್ಯ ಸುಸ್ಥಿರ. ಮನೆಯಲ್ಲಿ ವಿರಸ ಅಂತ್ಯ. ಸಮರಸತೆ ಮೂಡಿ ನಿರಾಳ ಭಾವ.          
ತುಲಾ
ಬಹುಮುಖ್ಯ ನಿರ್ಧಾರ ತಾಳಬೇಕಾದ ಪ್ರಸಂಗ ಉಂಟಾದೀತು. ಹಿಂಜರಿಕೆ ಬೇಡ. ಕೌಟುಂಬಿಕ ಒತ್ತಡ ನೆಮ್ಮದಿ ಭಂಗ ಮಾಡಬಹುದು.                      
ವೃಶ್ಚಿಕ
ನಿಮ್ಮ ಭಾವನೆ ವ್ಯಕ್ತಪಡಿಸಿದರೆ ಮಾತ್ರ ಸಂಬಂಧ ಸುಧಾರಣೆ ಸಾಧ್ಯ.  ಅದುಮಿಟ್ಟು ಕೂರಬೇಡಿ. ದೈಹಿಕ ನೋವು ಸಂಭವ.
ಧನು
 ಹಣ ಗಳಿಕೆಗೆ ಆದ್ಯತೆ ಕೊಡುವಿರಿ. ಹೊಸ ಕ್ಷೇತ್ರಕ್ಕೆ ಕೈಹಾಕದಿರಿ. ಹಿನ್ನಡೆ ಉಂಟಾದೀತು. ಮನೆಯಲ್ಲಿ ಬಂಧುಗಳ ಒತ್ತಡ ಎದುರಿಸುವಿರಿ.    
ಮಕರ
  ಯಾರ ಜತೆಗಾದರೂ ಭಿನ್ನಮತವಿದ್ದರೆ ಅದನ್ನು ಬೇಗ ನಿವಾರಿಸಿ.  ನಿಮ್ಮದಲ್ಲದ್ದನ್ನು ಪಡೆಯುವ ಪ್ರಯತ್ನ ಮುಂದುವರಿಸಬೇಡಿ.  
ಕುಂಭ
   ಉತ್ತಮವಾಗಿ ದಿನ ಆರಂಭಗೊಂಡರೂ ಸಂಜೆವೇಳೆಗೆ ನಿರಾಶೆ ಉಂಟಾಗಲಿದೆ. ನಿಮ್ಮ ಉದ್ದೇಶ ಆಂಶಿಕವಾಗಿ ಸ-ಲತೆ ಕಾಣಲಿದೆ.            
 ಮೀನ
ವೃತ್ತಿಯಲ್ಲಿ ಮುಖ್ಯ ನಿರ್ಧಾರ ಇಂದು ತಾಳದಿರಿ. ಸಂಘರ್ಷ ಮುಂದುವರಿಸುವ ಬದಲು ಸಂಧಾನ ಒಳಿತು.  ಕಿವಿಮಾತು ಆಲಿಸಿ.

Must Read