ಮೇಷ
ನಿಮ್ಮ ಉತ್ತಮ ನಿರ್ವಹಣೆಗೆ ಕೆಲವರು ಅಸೂಯೆ ತೋರುವರು. ಪ್ರವಾಸ ಸಾಧ್ಯತೆ. ಬೆನ್ನು ನೋವು ಉಪಶಮನ. ವಾಗ್ವಾದ ಮಾಡದಿರಿ.
ವೃಷಭ
ವಿತ್ತೀಯ ಪರಿಸ್ಥಿತಿ ತುಸು ಚಿಂತೆಗೆ ಕಾರಣ ಆದೀತು. ಅನವಶ್ಯ ವೆಚ್ಚ ನಿಯಂತ್ರಿಸಿ. ವಾದಕ್ಕೆ ಇಳಿಯಬೇಡಿ. ಅದರಿಂದ ಸಂಬಂಧ ಕೆಟ್ಟೀತು.
ಮಿಥುನ
ಪ್ರಮುಖ ವಿಚಾರದಲ್ಲಿ ಮಹತ್ವದ ಬೆಳವಣಿಗೆ. ಸರಿಯಾದ ತಂತ್ರ ಪ್ರಯೋಗಿಸಿದರೆ ಗೆಲುವು ಸಾಽಸುವಿರಿ. ಆತ್ಮೀಯರ ಭೇಟಿ.
ಕಟಕ
ಒತ್ತಡದಿಂದ ವಿರಾಮ. ಆತ್ಮೀಯರ ಜತೆ ಕಾಲಕ್ಷೇಪ. ಸಣ್ಣ ಜಗಳ ತಾರಕಕ್ಕೆ ಏರದಂತೆ ಎಚ್ಚರ ವಹಿಸಿ. ಪ್ರವಾಸದ ಅವಕಾಶ ಬಳಸಿಕೊಳ್ಳಿ.
ಸಿಂಹ
ಆಪ್ತರ ಜತೆ ಮುನಿಸು ಉಂಟಾದೀತು. ಅವರ ಸಣ್ಣ ತಪ್ಪಿಗೆ ರೇಗದಿರಿ. ಸಾಮಾಜಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ.
ಕನ್ಯಾ
ನಿಮ್ಮ ನಿರೀಕ್ಷೆಗೆ ನಿರಾಶೆ ತರುವ ಪ್ರಸಂಗ ಉಂಟಾದೀತು. ಆಪ್ತರ ಜತೆ ಮೋಜಿನಿಂದ ಹಣ ವ್ಯಯ. ಸಂತೋಷ ಕೂಟದಲ್ಲಿ ಭಾಗಿ.
ತುಲಾ
ಖಾಸಗಿ ಬದುಕಿನಲ್ಲಿ ಹೆಚ್ಚು ವ್ಯಸ್ತರಾಗುವ ಸನ್ನಿವೇಶ. ವೃತ್ತಿ ಕಾರ್ಯಕ್ಕೆ ಹಿನ್ನಡೆ. ಕೆಲವರ ಅತೃಪ್ತಿಗೆ ಕಾರಣರಾಗುವಿರಿ. ಹಳೆ ಸ್ನೇಹಿತರ ಭೇಟಿ.
ವೃಶ್ಚಿಕ
ಬಯಸಿದ ಕಾರ್ಯವೊಂದು ಇಂದು ಈಡೇರದೆ ನಿರಾಶೆ. ಆತ್ಮೀಯರ ಜತೆ ವಾಗ್ವಾದ. ವಿರಾಮ ಬಯಸಿದರೂ ಕೌಟುಂಬಿಕ ಒತ್ತಡ.
ಧನು
ನಿಮ್ಮ ಗುಣಾತ್ಮಕ ಸ್ವಭಾವ ಎಲ್ಲ ಸಮಸ್ಯೆ ಪರಿಹರಿಸಲಿದೆ. ಆತ್ಮೀಯರ ಸಹಕಾರ ಲಭ್ಯ. ವೃತ್ತಿ ಒತ್ತಡ ಪರಿಹಾರ. ಉದ್ದೇಶ ಪ್ರಾಪ್ರಿ. ಧನಲಾಭ.
ಮಕರ
ಹೊಸ ಯೋಜನೆ ಆರಂಭಿಸಲು ಕಾಲ ಸೂಕ್ತವಾಗಿದೆ. ಸಂಬಂಧ ಹಾಳು ಮಾಡುವ ವಿಚಾರ ಎತ್ತದಿರಿ. ಹೊಂದಾಣಿಕೆ ಮುಖ್ಯ ಎಂದರಿಯಿರಿ.
ಕುಂಭ
ಕೆಲವು ಖಾಸಗಿ ಸಮಸ್ಯೆ ಕಿರಿಕಿರಿ ಸೃಷ್ಟಿಸಲಿದೆ. ಸಣ್ಣ ವಿಷಯದಲ್ಲೂ ತಪ್ಪು ಹುಡುಕುವಿರಿ. ಅನಿರೀಕ್ಷಿತ ಧನಪ್ರಾಪ್ತಿ.
ಮೀನ
ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ಇತರರ ಸಮಸ್ಯೆಗೆ ಸ್ಪಂದಿಸಿರಿ. ಆದರೆ ಅವರ ಸಮಸ್ಯೆ ನಿಮ್ಮ ಮೇಲೆ ಎಳೆದುಕೊಳ್ಳಬೇಡಿ.



