August 18, 2026
Tuesday, August 18, 2026
spot_img

ಪಿಜಿಗಳಲ್ಲಿ ಕಳಪೆ ಆಹಾರ ನೀಡಿದ್ರೆ ಕ್ಷಮೆ ಇಲ್ಲ! ಅಡುಗೆ ಮನೆಯಲ್ಲಿ ಸಿಸಿಟಿವಿ ಕಡ್ಡಾಯ: ಖಾದರ್‌ ವಾರ್ನಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿಬಿದ್ದರೆ ಕ್ಷಮೆಯ ಮಾತೇ ಇಲ್ಲ, ಪ್ರತೀ ಅಡುಗೆ ಮನೆಯಲ್ಲಿಯೂ ಸಿಸಿಟಿವಿ ಕಡ್ಡಾಯ ಎಂದು ಸಚಿವ ಯು.ಟಿ. ಖಾದರ್‌ ಎಚ್ಚರಿಕೆ ನೀಡಿದ್ದಾರೆ.

ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಕರ್ತವ್ಯ ಪ್ರಜ್ಞೆ ಮೆರೆದ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಇಂದು ಆರೋಗ್ಯ ಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧಿಕಾರಿಗಳಿಗೆ ಗೌರವ ಸಮರ್ಪಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಪಿಜಿಗಳಲ್ಲಿ ಸ್ವಚ್ಛತೆ ಇರಲಿ. ವಿದ್ಯಾರ್ಥಿಗಳ ಬಳಿ ದುಡ್ಡು ಕಿತ್ತುಕೊಂಡು ಕೆಟ್ಟ ಸೌಲಭ್ಯ ನೀಡಬೇಡಿ ಎಂದು ಹೇಳಿದ್ದಾರೆ.

ಪಿಜಿಗಲಷ್ಟೇ ಅಲ್ಲ ಹಾಸ್ಟೆಲ್‌ಗಳನ್ನೂ ಚೆಕ್‌ ಮಾಡ್ತೀವಿ. ಯಾವತ್ತು, ಎಷ್ಟೊತ್ತಿಗೆ ಅನ್ನೋದೆಲ್ಲಾ ಹೇಳೋದೇ ಇಲ್ಲ. ದಿಢೀರ್‌ ದಾಳಿಗೆ ತಯಾರಾಗಿರಿ ಎಂದಿದ್ದಾರೆ. ಹೋಟೆಲ್‌ಗಳಲ್ಲಿ ಆಹಾರ ಪದಾರ್ಥ ತಯಾರು ಮಾಡುವ ಕಡೆ ತಪಾಸಣೆ ಮಾಡಿದ್ದೇವೆ, ಎಲ್ಲಿಂದ ಆಗಾರ ಪದಾರ್ಥಗಳು ಸರಬರಾಜು ಆಗುತ್ತವೆ ಅನ್ನೋದನ್ನೂ ತಪಾಸಣೆ ಮಾಡಿದ್ದೇವೆ. ರಾಜ್ಯದಲ್ಲಿ 30 ಟೀಂ ತಯಾರು ಮಾಡಿ, 60ಕ್ಕೂ ಹೆಚ್ಚು 3 ಸ್ಟಾರ್, 5 ಸ್ಟಾರ್, 8 ವೇರ್ ಹೌಸ್, 4 ಅಂತಾರಾಷ್ಟ್ರೀಯ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. 30 ಆಹಾರ ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯಕ್ಕೆ ಫಾರಿನ್ ಕಂಪನಿ ಚಾಕೊಲೆಟ್‌ಗಳು ಬರುತ್ತವೆ, ಶುಗರ್‌ನಲ್ಲಿ ಭಾರೀ ವ್ಯತ್ಯಾಸ ಇದೆ. ಸೆಂಟ್ರಲ್ ಆಕ್ಟ್‌ನಲ್ಲಿ ಚೇಂಜ್ ಆಗಬೇಕು. ಕೇಂದ್ರ ಆಹಾರ ಸಚಿವರಿಗೆ ಸಚಿವರಿಗೆ ಮಾಹಿತಿ ಕೊಡ್ತೇವೆ. ಇನ್ನೂ ಈಗಾಗಲೇ ಕಳಪೆ ಆಹಾರದೊಂದಿಗೆ ಸಿಕ್ಕಿಬಿದ್ದಿರುವ ಹೋಟೆಲ್‌ಗಳಿಗೆ ನೋಟಿಸ್ ಜೊತೆಗೆ 5 ಲಕ್ಷದ ವರೆಗೂ ದಂಡ ಹಾಕ್ತೇವೆ. ದಂಡ ಹಾಕಿ ಕ್ರಮ ವಹುಸುತ್ತೇವೆ, ಕ್ಷಮಿಸುವ ಮಾತೇ ಇಲ್ಲ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !