ಮೇಷ
ಮೌನವಾಗಿ ಕಠಿಣ ಪ್ರಯತ್ನ ಮಾಡಿ, ಯಶ ನಿಮ್ಮದಾಗಲಿದೆ. ಇತರರ ಮೆಚ್ಚುಗೆ ಗಳಿಸಲೆಂದೇ ವರ್ತಿಸಬೇಡಿ. ಕೌಟುಂಬಿಕ ಸಮಾಧಾನ.
ವೃಷಭ
ಕ್ರಿಯಾಶೀಲತೆಗೆ ತಕ್ಕ ಫಲ ಸಿಗಲಿದೆ. ಇತರರ ಜತೆ ವಿನಯದಿಂದ ವರ್ತಿಸಿ. ಹಳೆಯ ಆರೋಗ್ಯ ಸಮಸ್ಯೆ ಮರುಕಳಿಸಬಹುದು.
ಮಿಥುನ
ನಿಮ್ಮನ್ನು ನೀವೇ ಪರಾಮರ್ಶಿಸಬೇಕಾದ ಕಾಲ. ಅಗತ್ಯ ಬಿದ್ದರೆ ನಿಮ್ಮ ವರ್ತನೆ, ಕಾರ್ಯವೈಖರಿ ಬದಲಿಸಿಕೊಳ್ಳಿ. ಸ್ವಾಸ್ಥ್ಯ ಸಮಸ್ಯೆ ಕಾಡಬಹುದು.
ಕಟಕ
ವೃತ್ತಿ ಜೀವನದಲ್ಲಿ ತಾಳ್ಮೆ ಅಗತ್ಯ. ಹೊಸ ಸಂಬಂಧದಲ್ಲಿ ಬಿರುಕು ಉಂಟಾದೀತು. ಭಿನ್ನಮತ ಬಗೆಹರಿಸಿಕೊಳ್ಳಿ.
ಸಿಂಹ
ಹೊಸ ಉದ್ಯೋಗ ಅವಕಾಶ ಬಾಗಿಲು ತಟ್ಟಲಿದೆ. ಅದನ್ನು ಉಪಯೋಗಿಸಿಕೊಳ್ಳಿ. ಸಣ್ಣ ಮಟ್ಟಿನ ಅನಾರೋಗ್ಯ ಸಂಭವ. ಧನವ್ಯಯ.
ಕನ್ಯಾ
ಆಯ್ಕೆ ಪ್ರಕ್ರಿಯೆಯ ಫಲಿತಾಂಶ ನಿಮಗೆ ಪೂರಕವಾಗಲಿದೆ. ಪ್ರೀತಿಯಲ್ಲಿ ಯಶಸ್ಸು. ಚಾಲನೆಯಲ್ಲಿ ಎಚ್ಚರ ವಹಿಸಿ. ಧನಪ್ರಾಪ್ತಿ.
ತುಲಾ
ಉದ್ಯಮ ವ್ಯವಹಾರದಲ್ಲಿ ತುಸು ಎಚ್ಚರದ ನಡೆ ಇಡಿ. ನಿಮ್ಮ ಆದ್ಯತೆ ಖಾಸಗಿ ಬದುಕಿನ ಕಡೆ ತಿರುಗಬಹುದು. ತಲೆಬೇನೆ ಕಾಡಬಹುದು.
ವೃಶ್ಚಿಕ
ಒತ್ತಡ ಕಡಿಮೆ ಮಾಡಲು ಯತ್ನಿಸಿ. ಇಲ್ಲವಾದರೆ ಸ್ವಾಸ್ಥ್ಯ ಸಮಸ್ಯೆ ಉಂಟಾದೀತು. ಎಲ್ಲ ವಿಚಾರ ಸಮಾಧಾನದಿಂದ ಸ್ವೀಕರಿಸಿರಿ.
ಧನು
ನಿಮ್ಮ ಸುತ್ತ ಇವತ್ತು ಸಮಾಧಾನದ ಪರಿಸರ. ಅಶಾಂತಿ, ಉದ್ವಿಗ್ನತೆ ಮಾಯ. ಕಾಡುತ್ತಿದ್ದ ಒತ್ತಡ ನಿವಾರಣೆ. ಕೌಟುಂಬಿಕ ಸಹಕಾರ.
ಮಕರ
ವಿನಯವೇ ನಿಮ್ಮ ಶಕ್ತಿ. ಕೋಪತಾಪ ನಿಯಂತ್ರಿಸಿ. ಉದ್ಯಮದಲ್ಲಿ ಹೊಸ ಅವಕಾಶ. ಆಹಾರ ಸೇವನೆಯಲ್ಲಿ ಆರೋಗ್ಯ ನಿಯಮ ಪಾಲಿಸಿರಿ.
ಕುಂಭ
ನಿಮ್ಮ ನಿಲುವು ಖಚಿತವಾಗಿರಲಿ. ಗೆಲುವು ನಿಶ್ಚಿತ. ಪ್ರೀತಿಯ ವಿಚಾರದಲ್ಲಿ ಭಾವನಾತ್ಮಕ ಏರುಪೇರು. ಕೌಟುಂಬಿಕ ಸಮಸ್ಯೆ ಉಲ್ಬಣ.
ಮೀನ
ವೃತ್ತಿಯಲ್ಲಿ ಯಶಸ್ಸು. ಇತರರ ವರ್ತನೆಯ ನಿಮ್ಮ ಮನಶ್ಯಾಂತಿ ಕಲಕದಂತೆ ನೋಡಿಕೊಳ್ಳಿ. ಸಣ್ಣ ಗಾಯವಾಗುವ ಸಾಧ್ಯತೆ ಇದೆ. ಎಚ್ಚರ ವಹಿಸಿ.



