October 15, 2026
Thursday, October 15, 2026
spot_img

ಕಾವೇರಿ ವಿವಾದದ ನಡುವೆ ಇಂದು ಸಿಎಂ ಡಿ.ಕೆ. ಶಿವಕುಮಾರ್‌ – ವಿಜಯ್‌ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾವೇರಿ ನೀರು ಹಂಚಿಕೆ ವಿವಾದ ಚರ್ಚೆಯಲ್ಲಿರುವ ಬೆನ್ನಲ್ಲೇ ಇದೀಗ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಹಾಗೂ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಇಂದು ಭೇಟಿಯಾಗುವ ಸಾಧ್ಯತೆ ಇದೆ.

ಕಾವೇರಿ ನೀರು ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ ನೀಡಿದ್ದಾಗ ಸಿಎಂ ವಿಜಯ್‌ ಹಾಗೂ ಸಿಎಂ ಡಿಕೆಶಿ ಭೇಟಿ ಮಾಡಬೇಕಿತ್ತು. ಭೇಟಿಗೆ ಸಮಯವೂ ನಿಗದಿಯಾಗಿತ್ತು. ಆದರೆ ರಾಜ್ಯದಲ್ಲಿ ಪ್ರತಿಭಟನೆ ಇನ್ನಿತರ ಪರಿಸ್ಥಿತಿ ಕಡೆಯಿಂದ ವಿಜಯ್‌ ಭೇಟಿ ಕ್ಯಾನ್ಸಲ್‌ ಆಗಿತ್ತು.

ಇಂದು ಡಿಕೆಶಿ ಹಾಗೂ ವಿಜಯ್‌ ಚೆನ್ನೈನಲ್ಲಿ ಭೇಟಿಯಾಗುವ ಸಾಧ್ಯತೆ ಇದೆ. ಈ ಭೇಟಿ ನಡೆದರೆ ಕಾವೇರಿ ನೀರು ಮತ್ತು ಮೇಕೆದಾಟು ಯೋಜನೆ ಪ್ರಮುಖ ಚರ್ಚೆಯ ವಿಷಯವಾಗುವ ನಿರೀಕ್ಷೆಯಿದೆ. ಆಗಸ್ಟ್ 20 ರಂದು ಚೆನ್ನೈ ಹೊರವಲಯದ ಕೋವಲಂನಲ್ಲಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನ ನಡೆಯಲಿದೆ. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸುವ ಸಾಧ್ಯತೆ ಇದೆ.

ಯಾವೆಲ್ಲಾ ವಿಷಯಗಳ ಬಗ್ಗೆ ಚರ್ಚೆ

ಇಂದು ಸಂಜೆ ವಿಜಯ್‌ ಹಾಗೂ ಸಿಎಂ ಡಿಕೆಶಿ ಪ್ರತ್ಯೇಕವಾಗಿ ಭೇಟಿಯಾಗುವ ಸಾಧ್ಯತೆ ಇದೆ. ಕಾವೇರಿ ವಿಚಾರವಾಗಿ ಈವರೆಗೂ ತಮಿಳುನಾಡಿನ ಯಾವ ಸಿಎಂ ಕೂಡ ಕರ್ನಾಟಕ ಸಿಎಂ ಜೊತೆ ಭೇಟಿಯಾಗಿಲ್ಲ. ಮೇಕೆದಾಟು ಯೋಜನೆ ಕರ್ನಾಟಕಕ್ಕೆ ಕುಡಿಯುವ ನೀರು ಹಾಗೂ ನೀರಿನ ಅಗತ್ಯಗಳಿಗೆ ಪ್ರಮುಖವಾಗಿದೆ ಎಂದು ಕರ್ನಾಟಕ ಹೇಳುತ್ತಾ ಬಂದಿದೆ. ಆದರೆ ತಮಿಳುನಾಡು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಬಗ್ಗೆಯೂ ಚರ್ಚೆ ನಡೆಯಲಿದೆ.

Must Read