ಹೊಸದಿಗಂತ ವರದಿ ಅಂಕೋಲಾ:
ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ತಂಡದ ಬೈಕ್, ಲಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಸುಂಕಸಾಳ ಕೋಟೆಪಾಲ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಭವಿಸಿದೆ.
ಬೈಕ್ ಸವಾರ ದಾಂಡೇಲಿ ನಿವಾಸಿ ಸಂಜಯ ಬೋಸ್ಲೆ(23)ಮೃತ ವ್ಯಕ್ತಿಯಾಗಿದ್ದು, ಹಿಂಬದಿ ಸವಾರ ಆಕಾಶ ಎಂಬಾತನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ದಾಂಡೇಲಿಯ ಪೇಪರ್ ಮಿಲ್ ನ ಉದ್ಯೋಗಿ ಸಂಜಯ್ ಮತ್ತು 8 ಜನ ಗೆಳೆಯರ ತಂಡ ಒಟ್ಟು ನಾಲ್ಕು ಬೈಕುಗಳಲ್ಲಿ ಜಲಪಾತವೊಂದರ ವೀಕ್ಷಣೆಗೆ ಅಂಕೋಲಾ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:
ಸದ್ಯ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನಾ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



