ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಂದೀಪ್ ರೆಡ್ಡಿ ವಂಗಾ ಹಾಗೂ ಅವರ ಸಹೋದರ ಪ್ರಣಯ್ ರೆಡ್ಡಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸ್ಪಿರಿಟ್ ಸಿನಿಮಾದಲ್ಲಿ ನಟಿಸೋದಕ್ಕೆ ಒಕೆ ಎಂದಿದ್ದ ದೀಪಿಕಾ ತದನಂತರ ಸಾವಿರಾರು ಬಗೆಯ ಡಿಮ್ಯಾಂಡ್ ಮಾಡಿದ್ದರು, ಕಥೆ ಲೀಕ್ ಮಾಡಿದ್ದರು ಎಂದು ದೂರಿದ್ದರು. ಆದರೆ ಇದೀಗ ದೀಪಿಕಾ ಪಡುಕೋಣೆ ಕಡೆಯ ಸ್ಟೋರಿಯನ್ನು ಕೇಳೋಕೆ ಅವಕಾಶ ಸಿಕ್ಕಿದೆ.
ಪ್ರಣಯ್ ರೆಡ್ಡಿ ಹೇಳಿದ್ದೇನು?
ದೀಪಿಕಾ ಪಡುಕೋಣೆ ಸಿನಿಮಾಕ್ಕೆ ಅತಿಯಾದ ಸಂಭವಾನೆ ಕೇಳಿದ್ದಾರೆ ಹಾಗೂ ಸಮಯವನ್ನು ನೀಡುತ್ತಿಲ್ಲ. ಸಿನಿಮಾದ ದುಡಿದ ಹಣದಲ್ಲಿ ಶೇಕಡಾ 10 ರಷ್ಟು ಲಾಭವನ್ನು ನೀಡಬೇಕು ಎಂದು ಕೇಳಿದ್ದರು. ಇದು ನಮಗೆ ಸರಿ ಅನಿಸಿಲ್ಲ. ಹೀಗಾಗಿ ಬೇರೆ ನಟಿಯ ಹುಡುಕಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಇದರ ಜೊತೆಗೆ ದೀಪಿಕಾ ಸಿನಿಮಾದ ಕಥೆಯನ್ನು ಹಾಗೂ ಪಾತ್ರಗಳ ಸ್ಟೋರಿಯನ್ನು ಲೀಕ್ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಲಾಗಿತ್ತು.
ದೀಪಿಕಾ ಪಡುಕೋಣೆ ಹೇಳಿದ್ದೇನು?
ಈ ವಿಷಯದ ಬಗ್ಗೆ ದೀಪಿಕಾ ಪಡುಕೋಣೆ ನೇರವಾಗಿ ಏನನ್ನೂ ಮಾತನಾಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಲೈಕ್ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಪೋಸ್ಟ್‌ನಲ್ಲೇನಿದೆ?
ಸ್ಪಿರಿಟ್ ಸಿನಿಮಾದ ಲಾಭದಲ್ಲಿ ಶೇ. ಹತ್ತರಷ್ಟು ನನಗೆ ನೀಡಬೇಕು ಎಂದು ದೀಪಿಕಾ ಪಡುಕೋಣೆ ಕೇಳಿದ್ದರು. ಆದರೆ ವಂಗಾ ಬ್ರದರ್ಸ್ ದೀಪಿಕಾ ಅವರ ಇಡೀ ಆಸ್ತಿ ಕೇಳಿದ ಹಾಗೆ ರಿಯಾಕ್ಟ್ ಮಾಡಿದ್ದಾರೆ. ದೀಪಿಕಾ ಸಂಭಾವನೆ ಜಾಸ್ತಿ ಕೇಳಿದ್ದು, ಕಥೆ ಲೀಕ್ ಮಾಡಿದ್ದಾರೆ ಎಂದಿದ್ದು ಎಲ್ಲವೂ ಸುಳ್ಳಿನಂತೆ ಕಾಣಿಸುತ್ತಿದೆ. ಒಬ್ಬ ಮಹಿಳೆ ನೋ ಅಂದಿದ್ದನ್ನು ಗಂಡಸರ ಈಗೋ ತೆಗೆದುಕೊಳ್ಳೋಕೆ ಒಪ್ಪಿಲ್ಲ! ಎಂದು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್‌ನ್ನು ದೀಪಿಕಾ ಲೈಕ್ ಮಾಡಿದ್ದು, ಪರೋಕ್ಷವಾಗಿ ಈ ಪೋಸ್ಟ್‌ನಲ್ಲಿರೋದೇ ಸತ್ಯ ಎಂದು ಹೇಳಿದ್ದಾರೆ.



