August 29, 2026
Saturday, August 29, 2026
spot_img

ತುಂಬಾ ಉಪಯುಕ್ತ ಮಾಹಿತಿ! ಯಾರೇ ಅಪರಿಚಿತರು ಕರೆ ಮಾಡಿದ್ರೆ ನಿಮ್ಮ ರಿಯಾಕ್ಷನ್‌ ಹೀಗಿರಲಿ, ‘ಹಲೋ’ ಎಂದೂ ಹೇಳಬೇಡಿ

ಲಕ್ಷ ಲಕ್ಷ ರೂಪಾಯಿ ಹಣ ಕಳೆದುಕೊಂಡ ನಂತರ ನಾವೇ ನೂ ಮಾತಾಡೇ ಇಲ್ಲ ʼಹಲೋʼ ಅಂತ ಅಷ್ಟೇ ಹೇಳಿದ್ದು ಎಂದು ನೀವು ಕಣ್ಣೀರಿಟ್ಟರೆ ಯಾವ ಉಪಯೋಗವೂ ಇಲ್ಲ. ಯಾರೇ ಅಪರಿಚಿತರು ಕರೆ ಮಾಡಿದಾಗ ನೀವಾಗಿಯೇ ಮೊದಲು ಹಲೋ ಅನ್ನೋದನ್ನು ನಿಲ್ಲಿಸಿ. ನಿಮ್ಮ ವಾಯ್ಸ್‌ನ ಸಣ್ಣ ಝಲಕ್‌ ಸಿಕ್ಕರೂ ಸಾಕು ಎಐ ದುರ್ಬಳಕೆ ಮಾಡಿಕೊಂಡು ನಿಮ್ಮ ಖಾತೆಯ ಹಣ ಅಥವಾ ನಿಮ್ಮ ಸ್ನೇಹಿತರಿಗೆ ನಿಮ್ಮದೇ ದನಿಯಿಂದ ಕರೆ ಮಾಡಿ ಹಣ ಪೀಕುತ್ತಾರೆ. ರಾಜ್ಯದಲ್ಲಿ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಪ್ರಕರಣಗಳಲ್ಲಿ ನಮ್ಮದೂ ಒಂದಾಗಬಾರದೆಂದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ..‌

ಹಲೋ, ಒಕೆ, ಸರಿ ಏನನ್ನೂ ಹೇಳಬೇಡಿ. ಕರೆ ಮಾಡಿದ ವ್ಯಕ್ತಿ ನಿಮಗೆ ಸಂಬಂಧವೇ ಇಲ್ಲದವರಾಗಿದ್ದರೆ ತಕ್ಷಣವೇ ಫೋನ್‌ ಕಟ್‌ ಮಾಡಿಬಿಡಿ. ಸ್ಕ್ಯಾಮ್‌ ಮಾಡೋದಕ್ಕೆ ಕರೆ ಮಾಡ್ತಿದ್ದಾರೆ ಎನ್ನುವ ಸಣ್ಣ ಹಿಂಟ್‌ ಅಥವಾ ಗಟ್‌ ಫೀಲಿಂಗ್‌ ಇದ್ದರೂ ತಕ್ಷಣ ಫೋನ್‌ ಕಟ್‌ ಮಾಡಿ. ದೀರ್ಘಕಾಲ ಕರೆಯಲ್ಲಿದ್ದಷ್ಟು ಸಮಸ್ಯೆ ಜಾಸ್ತಿ.

ಇನ್ನು ಕರೆ ಮಾಡಿದವರು ಮೊದಲು ಯಾವ ರೀತಿ ಪ್ರಶ್ನೆ ಕೇಳುತ್ತಾರೆ ಗಮನಿಸಿ. ಸ್ಕ್ಯಾಮರ್ಸ್ ಎನ್ನುವ ಫೀಲಿಂಗ್‌ ಬಂದಾಗ ನಿಮ್ಮ ಬಾಯಿಂದ ಒಂದು ಪದವೂ ಹೊರಗೆ ಬರೋದು ಬೇಡ. ನಿಮ್ಮ ವಾಯ್ಸ್‌ನ್ನು ಬಳಸಿ ಅವರು ಹಣ ಪೀಕುವ ಮಾರ್ಗಗಳನ್ನು ಕಂಡುಹಿಡಿದುಕೊಂಡಿರುತ್ತಾರೆ.

ಇನ್ನು ನಿಮಗೆ ಬಂದ ಕಾಲ್‌ನಲ್ಲಿ ರೊಬೊಟ್‌ ದನಿ ಬಂದರೆ ಅಥವಾ ಕರೆ ಮಾತ್ರ ಬಂದು ಏನೂ ಸದ್ದೇ ಇಲ್ಲ ಎಂದಾದರೆ ತಕ್ಷಣವೇ ಕಟ್‌ ಮಾಡಿ. ನಿಮ್ಮ ಲೈನ್‌ ಆಕ್ಟೀವ್‌ ಆಗಿದೆಯಾ ಎಂದು ಚೆಕ್‌ ಮಾಡೋದಕ್ಕೆ ರೋಬೊಟ್‌ ಕಾಲಿಂಗ್‌ ಮಾಡಲಾಗಿರುತ್ತದೆ.

ಕಂಪನಿ ಕಾಲ್‌ಗಳ ಮುಖವಾಡ ಹಾಕಿಕೊಂಡು ಬರುವ ಕಾಲ್‌ಗಳ ಬಗ್ಗೆಯೂ ಗಮನ ಇರಲಿ. ಒಂದನ್ನು ಒತ್ತಿ, ಎರಡನ್ನು ಒತ್ತಿ ಎಂದು ಅವರು ಹೇಳಿದಾಗ ಒಕೆ ಎಂದು ಒತ್ತಡಬೇಡಿ. ತಕ್ಷಣವೇ ಕರೆ ಕಟ್‌ ಮಾಡಿ ಬ್ಲಾಕ್‌ ಮಾಡಿಬಿಡಿ. ನಿಮ್ಮ ಹೆಸರೇನು, ಅಡ್ರೆಸ್‌ ಏನು? ಡೇಟ್‌ ಆಫ್‌ ಬರ್ತ್‌ ಕೊಡಿ ಎಂದು ಹೇಳಿದರೆ ತಕ್ಷಣವೇ ಕಾಲ್ ಕಟ್‌ ಮಾಡಿ.

ನಿಮ್ಮ ಅಕೌಂಟ್‌ ಯಾವ ಬ್ಯಾಂಕ್‌ನಲ್ಲಿದೆ? ನೀವು ಮನೆಯಲ್ಲಿ ಯಾವ ಫ್ರಿಡ್ಜ್‌ ಬಳಸುತ್ತೀರ, ನಿಮಗೆ ಒಂದು ವೋಚರ್‌ ಬಂದಿದೆ ಎಂದೆಲ್ಲಾ ಹೇಳುತ್ತಾರೆ. ಈ ಮೋಸಕ್ಕೆ ಬಲಿಯಾಗಬೇಡಿ. ಯಾವ ಖಾಸಗಿ ಮಾಹಿತಿಯನ್ನೂ ನೀಡಬೇಡಿ. ಬ್ಯಾಂಕ್‌ ಅಕೌಂಟ್‌ನಲ್ಲಿ ಸಮಸ್ಯೆಯಾಗಿದೆ ಅಕೌಂಟ್ ನಂಬರ್‌ ಕೊಡಿ, ಒಟಿಪಿ ಕೊಡಿ ಎಂದು ಕೇಳಿದಾಗ ಕರೆ ಕಟ್‌ ಮಾಡಿ ನಂತರ ಬ್ಯಾಂಕ್‌ಗೆ ಹೋಗಿಯೇ ವಿಚಾರಿಸಿ.

ಕಾಲ್‌ ಬಂದ ನಂತರ ಏನು ಮಾಡೋದು?

ಯಾವೆಲ್ಲಾ ಸಂಖ್ಯೆಯಿಂದ ಕಾಲ್‌ ಬರುತ್ತದೋ ಆ ಸಂಖ್ಯೆಯನ್ನು ಬ್ಲಾಕ್‌ ಮಾಡಿಬಿಡಿ.

ಸ್ಪಾಮ್‌ ಫಿಲ್ಟರ್‌ಗಳನ್ನು ಆನ್‌ ಮಾಡಿಕೊಳ್ಳಿ. ಸ್ಪಾಮ್‌ ಕರೆಗಳು ಬಂದಾಗ ನಿಮ್ಮ ಸ್ಕ್ರೀನ್‌ ರೆಡ್‌ ಆಗಿ ಕಾಣಿಸುತ್ತದೆ. ಆಗ ನೀವು ಕರೆಯನ್ನು ಸ್ವೀಕರಿಸುವುದೇ ಬೇಡ.

ಕೆಲವೊಮ್ಮೆ ಕರೆಗಳು ಜೆನ್ಯೂನ್‌ ಆಗಿಯೂ ಇರುತ್ತವೆ. ಕರೆ ಬಂದಾಗ ಈ ಕಡೆಯಿಂದ ಮೊದಲು ಮಾತನಾಡಬೇಡಿ. ಅವರು ಏನು ಹೇಳುತ್ತಾರೆ ಕೇಳಿಸಿಕೊಂಡು ಮುಂದಕ್ಕೆ ಅದು ನಿಜವೋ ಸ್ಕಾಮರ್ಸ್‌ ಕರೆಯೋ ಡಿಸೈಡ್‌ ಮಾಡಿ.

ಕರೆ ಬಂದಾಗ ಅವರು ಮಾತನಾಡುವಂತೆ ಫೋರ್ಸ್‌ ಮಾಡಿದರೆ ಸರಿ, ಒಕೆ, ಯೆಸ್‌, ಹೌದು ಎನ್ನುವಂತಹ ಪರ್ಮಿಷನ್‌ ಕೊಡುವ ಪದಗಳನ್ನು ಅವಾಯ್ಡ್‌ ಮಾಡಿ. ಇಂಟ್ರೆಸ್ಟ್‌ ಇಲ್ಲ, ಮತ್ತೆ ಕಾಲ್‌ ಮಾಡ್ಬೇಡಿ ಎಂದೋ, ಈ ರೀತಿ ಕರೆಗಳನ್ನು ಮಾಡಬೇಡಿ. ನನ್ನ ನಂಬರ್‌ ರಿಮೂವ್‌ ಮಾಡಿ ಎಂದಷ್ಟೇ ಹೇಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !