September 4, 2026
Friday, September 4, 2026
spot_img

ವರ್ಕೌಟ್ ಚೆನ್ನಾಗಿ ಮಾಡ್ತಿದ್ದೀರಾ…ಆದ್ರೆ ಪ್ರೋಟೀನ್ ರಿಚ್ ಫುಡ್ ತಿನ್ನೋದಿಲ್ಲ ಅಂದ್ರೆ ಏನಾಗುತ್ತೆ ಗೊತ್ತಾ?

ವರ್ಕೌಟ್ ಚೆನ್ನಾಗಿಯೇ ಮಾಡ್ತಿದ್ದೀರಾ….ಫುಡ್ ಕೂಡ ಚೆನ್ನಾಗಿಯೇ ತಿಂತಿದ್ದೀರಾ… ಆದ್ರೆ ಅದ್ರಲ್ಲಿ ಪ್ರೋಟೀನ್ ಇಲ್ಲದೆ ಇದ್ರೆ ನೀವು ಮಾಡಿರೋ ವರ್ಕೌಟ್ ಎಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಅನ್ನೋ ವಿಷ್ಯ ಗೊತ್ತಿದ್ಯಾ?

ಹೌದು! ಸಖತ್ ವರ್ಕೌಟ್, ಡಯೆಟ್ ಫುಡ್ ಎಲ್ಲಾ ತಿಂದ್ರು ಪ್ರೋಟೀನ್ ಇಲ್ಲ ಅಂದ್ರೆ ನಿಮ್ಮ ಮಸಲ್ಸ್ ಬೆಳವಣಿಗೆಯಾಗೋದಿಲ್ಲ ಇದೊಂದೇ ಸಮಸ್ಯೆಯಲ್ಲ ಇನ್ನ ಹಲವಾರು ತೊಂದರೆಗೆಳು ಉಂಟಾಗುತ್ತೆ.

ಮೊದಲನೆಯದ್ದು ಹಾಗೂ ಮುಖ್ಯವಾದದ್ದು ಅಂದ್ರೆ ಸ್ನಾಯುಗಳ ಬೆಳವಣಿಗೆ ನಿಧಾನವಾಗುತ್ತೆ. ವರ್ಕೌಟ್ ನಂತರ ಸ್ನಾಯುಗಳು ಸಣ್ಣ ಪ್ರಮಾಣದಲ್ಲಿ ತುಂಡಾಗಿರುತ್ತವೆ ಅದು ರಿಪೇರಿ ಆಗ್ಬೇಕಾದ್ರೆ ಪ್ರೋಟೀನ್ ತುಂಬಾನೇ ಮುಖ್ಯ.

ವರ್ಕೌಟ್‌ನಿಂದ ಮಸಲ್ಸ್ ಸಣ್ಣ ಪ್ರಮಾಣದಲ್ಲಿ ತುಂಡಾಗಿರುತ್ತವೆ ನೀವು ಪ್ರೋಟೀನ್ ಸೇವಿಸದಿದ್ದರೆ ಸ್ನಾಯುಗಳಲ್ಲಿ ನೋವು ದಣಿವು ಹೆಚ್ಚಾಗುತ್ತದೆ.

ಪ್ರೋಟೀನ್ ಹಾಗೂ ಒಟ್ಟಾರೆ ಆಹಾರ ಸಾಕಾಗದಿದ್ದರೆ ವರ್ಕೌಟ್ ಕಷ್ಟವಾಗಬಹುದು. ನಿಮ್ಮ ಶಕ್ತಿ ಕಡಿಮೆಯಾಗಿ ತೂಕ ಎತ್ತಲು ಕಷ್ಟವಾಗಬಹುದು.

ಪ್ರೋಟೀನ್ ತಿನ್ನದೇ ಇರೋದ್ರಿಂದ ರೋಗನಿರೋಧಕ ಶಕ್ತಿಯ ಮೇಲೂ ಪರಿಣಾಮ ಬೀರಬಹುದು.

ಒಟ್ಟಾರೆ ಹೇಳೋದಾದ್ರೆ ಪ್ರೋಟೀನ್ ತಿನ್ನೋದು ಸ್ನಾಯುಗಳ ಬೆಳವಣಿಗೆ, ಚೇತರಿಕೆ ಮತ್ತು ಶಕ್ತಿ ಕಾಪಾಡಿಕೊಳ್ಳಲು ಬಹಳ ಮುಖ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !